September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರಿಪಳ್ಳ ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ

ಗುರಿಪಳ್ಳ: ಉಜಿರೆ ಇಂದಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ಬಿರುಕು ಬಿಟ್ಟ ಪರಿಣಾಮ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಘನವಾಹನ ಸಂಚಾರ ನಿಷೇಧಿಸಿದ ಪರಿಣಾಮ ಸದರಿ ರಸ್ತೆಯ ಮೂಲಕ ಸಂಚರಿಸುವ ನೂರಾರು ಪ್ರಯಾಣಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗಿರುತ್ತದೆ ಆದುದರಿಂದ ಇಂದು ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕರನ್ನು ಬೇಟಿಯಾಗಿ ಬಸ್ ಸಂಚಾರ ವ್ಯವಸ್ಥೆಯನ್ನು ಪರ್ಯಾಯ ರಸ್ತೆಯ ಮೂಲಕ ಒದಗಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಘಟಕ ವ್ಯವಸ್ಥಾಪಕರು ಇಂದು ಸಂಜೆಯೇ ಗುರಿಪಳ್ಳಕ್ಕೆ ಬಸ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಇದಕ್ಕೆ ಪೂರಕವಾದ ಆದೇಶವನ್ನು ಕೂಡ ಸಂಬಂಧಪಟ್ಟವರಿಗೆ ನೀಡಿರುತ್ತಾರೆ.

ಈ ಸಂಧರ್ಭದಲ್ಲಿ ಯಶೋಧರ ಗೌಡ ಕೊಡ್ಡೋಲು, ಗುರುರಾಜ್ ಗುರಿಪಳ್ಳ ಹಾಗೂ ಇತರರು ಉಪಸ್ಥಿತರಿದ್ದರು.

Related posts

ವಲಯಾರಣ್ಯಾಧಿಕಾರಿ ತ್ಯಾಗರಾಜ್ ಅಮಾನತಿಗೆ ಕೆಎಟಿ ತಡೆ: ಕರ್ತವ್ಯಕ್ಕೆ ಹಾಜರು

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಕುವೆಟ್ಟು ಗ್ರಾ.ಪಂ. ನಿಂದ ಸಹಾಯಧನ ಹಸ್ತಾಂತರ

Suddi Udaya

ರಾಜ್ಯ ಸರಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಮೊಗ್ರು : ಮುಗೇರಡ್ಕ ದೈವಸ್ಥಾನ ವತಿಯಿಂದ ಮುಗೇರಡ್ಕ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತ

Suddi Udaya
error: Content is protected !!