38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು ಹೈಸ್ಕೂಲ್ ರೀಯೂನಿಯನ್ ವತಿಯಿಂದ ಇತ್ತೀಚೆಗೆ ನಿಧನರಾದ ಡೇವಿಡ್ ಡಿಸೋಜಾರಿಗೆ ಶ್ರದ್ಧಾಂಜಲಿ

ಮಡಂತ್ಯಾರು : ಹೈಸ್ಕೂಲ್ ರೀಯೂನಿಯನ್ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಡೇವಿಡ್ ಡಿಸೋಜ ಇವರ ಶ್ರದ್ಧಾಂಜಲಿ ಸಭೆಯು ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ “ಕ್ಷೀರಾಂಬುಧಿ” ಸಭಾಂಗಣದಲ್ಲಿ ನಡೆಯಿತು.

ಸಹಪಾಠಿಗಳೊಂದಿಗೆ ಶಾಲಾ ದಿನಗಳಲ್ಲಿ ವಿದ್ಯೆಯನ್ನ ಧಾರೆ ಎರೆದ ಗುರುಗಳಾದ ಜೆರಾಲ್ಡ್ ಮೊರಾಸ್ , ಹೆರಾಲ್ಡ್ ಡಿಸೋಜ , ಜೆರಾಲ್ಡ್ ಡಿಸೋಜ, ಶ್ರೀಮತಿ ಶಾಂತಿ ಮೇರಿ ಡಿಸೋಜ ಇವರುಗಳು ಅಗಲಿದ ಡೇವಿಡ್ ಡಿಸೋಜ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೆರಾಲ್ಡ್ ಮೊರಾಸ್ ಹಾಗೂ ಹೆರಾಲ್ಡ್ ಡಿಸೋಜ ರವರು ಶಿಷ್ಯನ ಅಗಲಿಕೆಯ ನೋವಿನೊಂದಿಗೆ ಶಾಲಾ ಸಮಯಗಳಲ್ಲಿ ಶ್ರೀಯುತರು ಇದ್ದ ರೀತಿಯ ಅನುಭವ ಹಂಚಿಕೊಂಡರು.

ಸಂಸ್ಥೆಯ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆಯವರು ಮಾತನಾಡಿ ಗೆಳೆಯನ ಅಗಲುವಿಕೆಯಿಂದ ಸಮಾಜಕ್ಕೆ, ಕುಟುಂಬಕ್ಕೆ ಮಾತ್ರವಲ್ಲದೆ ಹೈಸ್ಕೂಲ್ ರೀಯೂನಿಯನ್ ತಂಡದ ಕೊಂಡಿ ಕಳಚಿದಂತಾಯಿತು. ಇಂತಹ ಸಂದರ್ಭದಲ್ಲಿ ಈ ನೋವನ್ನು ಬರಿಸುವ ಶಕ್ತಿಯನ್ನು ಆ ದೇವರು ಎಲ್ಲರಿಗೂ ಕರುಣಿಸಲೆಂದು ನುಡಿ ನಮನ ಸಲ್ಲಿಸಿದರು.
ಶ್ರೀಮತಿ ಶಾಂತಿ ಪ್ರಿಯ ಪಿಂಟೋ ಮಾತನಾಡಿ ಗೆಳೆತನದ ಅನುಭವನ್ನು ಹಂಚಿಕೊಂಡರು. ಡೆಸ್ಮಂಡ್ ಜೋಯೆಲ್ ಕಾರ್ಯಕ್ರಮ ನಿರೂಪಿಸಿ, ಸಂಪತ್ ಕುಮಾರ್ ಧನ್ಯವಾದವಿತ್ತರು.
ಸಂತೋಷದ ಸಂದರ್ಭದಲ್ಲಿ ಮಾತ್ರ ಅಲ್ಲಾ ದುಃಖದ ಸಮಯದಲ್ಲೂ ಹೈಸ್ಕೂಲ್ ರೀ ಯೂನಿಯನ್ ಮಡಂತ್ಯಾರು ಸದಾ ಸ್ಪಂದಿಸುತ್ತದೆ ಎನ್ನುವುದನ್ನು ಎಲ್ಲಾ ಸಹಪಾಠಿಗಳು ಶ್ರದ್ಧಾಂಜಲಿ ಸಮರ್ಪಿಸುವ ಮುಖೇನ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದಂತಾಗಿದೆ.

Related posts

ನಾಳೆಯಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

Suddi Udaya

ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ, ಸಂಶೋಧನೆ, ಮತ್ತು ಉದ್ಯಮಶೀಲತೆ ಕಾರ್ಯಾಗಾರ

Suddi Udaya

ಲಾಯಿಲ : ಸಿಂಧೂರ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ಪಡಂಗಡಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಉಜಿರೆ: ಶ್ರೀ ಧ.ಮಂ. ಆಂಗ್ಲ ಮಾಧ್ಯಮ (ರಾಜ್ಯಪಠ್ಯಕ್ರಮ) ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ “ಅಕ್ಷಯ ಪಾಕಶಾಲೆ” ಶಾಸಕ ಹರೀಶ್ ಪೂಂಜರಿಂದ ಲೋಕಾರ್ಪಣೆ: ಸಂಘದಿಂದ ರೂ. 70 ಸಾವಿರ ವೈದ್ಯಕೀಯ ನೆರವು

Suddi Udaya
error: Content is protected !!