ದಕ್ಷಿಣ ಕನ್ನಡ ಜಿಲ್ಲಾ ಬಸದಿ ಸ್ವಚ್ಛತಾ ತಂಡ ಬಸದಿಯ ಸ್ವಚ್ಛತೆಯ ಜೊತೆಗೆ ಸಮಾಜಮುಖಿ ಕೆಲಸಕಾರ್ಯಗಳತ್ತ ಹೆಜ್ಜೆ ಇಟ್ಟಿತ್ತು . ಇದೀಗ ಪರಿಸರ ಸಂರಕ್ಷಣೆಯ ಕೆಲಸದತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತ, ಮಂಗಳೂರು ವಿಭಾಗ ಮತ್ತು ಬಂಟ್ವಾಳ ವಲಯದ ಸಹಯೋಗದಲ್ಲಿ ಬಸದಿ ಸ್ವಚ್ಛತಾ ತಂಡವು ಕಾರಿಂಜದ ಕುಂಟರ ಪಲ್ಕೆ ಕೊಡ್ಯಾ ಮಲೆ ಎಂಬಲ್ಲಿ ವನಮಹೋತ್ಸವದ ಅಂಗವಾಗಿ ಪಕ್ಷಿ ಸಂಕುಲದ ರಕ್ಷಣೆಗಾಗಿ ಬೀಜಬಿತ್ತನೆ ಹಾಗೂ ಹಸಿರಿಗಾಗಿ ಮಾವು, ಹಲಸು, ಪೇರಳೆ, ಪುನರ್ಪುಳಿ, ಹುಣಸೆ ಹುಳಿ, ಕೊಕ್ಕೋ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದರು. ಊರ ಪರಿಸರ ಪ್ರೇಮಿಗಳು ಕೈ ಜೋಡಿಸಿದರು.
ಇದೀಗ ಬಸದಿ ಸ್ವಚ್ಛತಾ ತಂಡದವರ ಮರ ಗಿಡಗಳನ್ನು ಬೆಳಿಸಿ ಪ್ರಾಣಿ ಪಕ್ಷಿ ಸಂಕುಲ ಉಳಿಸಿ, ಪ್ರಕೃತಿಯನ್ನು ಪ್ರೀತಿಸಿ ಎಂಬ ಧ್ಯೇಯದ ಪ್ರಾಮಾಣಿಕ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.