24.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆದ್ರಬೆಟ್ಟು ಶ್ರೀ ಕ್ಷೇತ್ರ ಮಹಮ್ಮಾಯಿ ಮಾರಿಗುಡಿ ಜೀರ್ಣೋದ್ಧಾರದ “ವಿಜ್ಞಾಪನಾ ಪತ್ರ” ಬಿಡುಗಡೆ

ಬೆದ್ರಬೆಟ್ಟು: ಸುಮಾರು 800 ವರ್ಷಗಳ ಇತಿಹಾಸವಿರುವ ರಾಜಮನೆತನದ ಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಕ್ಷೇತ್ರ ಬೆದ್ರಬೆಟ್ಟು ಶ್ರೀ ಕ್ಷೇತ್ರ ಮಹಮ್ಮಾಯಿ ಮಾರಿಗುಡಿ ಜೀರ್ಣೋದ್ಧಾರದ “ವಿಜ್ಞಾಪನಾ ಪತ್ರ” ಬಿಡುಗಡೆ ಕಾರ್ಯಕ್ರಮವು ಕ್ಷೇತ್ರದಲ್ಲಿ ಜು.7 ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ವಿಜ್ಞಾಪನಾ ಪತ್ರವನ್ನು ಕರ್ನಾಟಕ ರಾಜ್ಯ ಮಾಜಿ ಸಚಿವ ಗಂಗಾಧರ ಗೌಡ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಮೋದ್ ಕುಮಾರ್ ವಹಿಸಿದ್ದರು. ಚಂದ್ರಶೇಖರ್ ಸ್ವಸ್ತಿಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮುಕುಂದ ಸುವರ್ಣ, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಎಲ್ ಲಕ್ಷ್ಮಣ ಗೌಡ, ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಕೊಲ್ಲಿ ದೇವಸ್ಥಾನದ ಕಾರ್ಯದರ್ಶಿ ದಾಸಪ್ಪ ಗೌಡ, ಊರಿನ ಹಿರಿಯರಾದ ಸುಂದರ ಗೌಡ, ಶೀನಪ್ಪ ಗೌಡ, ನೇತ್ರಾ ಕೊಡಂಗೆ, ಉದ್ಯಮಿ ಶ್ರೀಧರ್ ಗುಡಿಗಾ‌ರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಕ್ಷಿತಾ ಪ್ರಾರ್ಥಿಸಿ, ಚಂದ್ರಶೇಖರ್ ಗೌಡ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Related posts

ಕನ್ಯಾಡಿ-2 : ನಾರ್ಯ ಎಂಬಲ್ಲಿ ಚಿರತೆ ಪತ್ತೆ

Suddi Udaya

ಬೆಳ್ತಂಗಡಿ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಮತ ಯಾಚನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ’ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಿಶಿಲ: ಚಿಕನ್ ಸೆಂಟರ್ ಶುಭಾರಂಭ

Suddi Udaya

ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಇದರ 8 ನೇ ವಾರ್ಷಿಕೋತ್ಸವ

Suddi Udaya
error: Content is protected !!