23.9 C
ಪುತ್ತೂರು, ಬೆಳ್ತಂಗಡಿ
May 17, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸರ್ಕಾರಿ ಇಲಾಖಾ ಸುದ್ದಿ

ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ನಿರ್ದೇಶಕರುಗಳ ಆಯ್ಕೆ: ರಾಜ್ಯ ಮಟ್ಟದ ಸಮಿತಿಯ ಸದಸ್ಯರಾಗಿ ಹರೀಶ್ ಕುಮಾರ್ ನೇಮಕ

ಬೆಳ್ತಂಗಡಿ: ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳನ್ನು ನೇಮಿಸಲಾಗಿದ್ದು, ನಿರ್ದೇಶಕರು, ಸದಸ್ಯರುಗಳ ಆಯ್ಕೆಗೆ ರಾಜ್ಯಮಟ್ಟದಲ್ಲಿ ಸಮಿತಿಯನ್ನು ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ವಿವಿಧ ನಿಗಮ ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆಯ ಈ ರಾಜ್ಯ ಸಮಿತಿಯ ಸದಸ್ಯರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಶಾಸಕರಾದ ಕೆ. ಹರೀಶ್ ಕುಮಾರ್ ಅವರು ನೇಮಕಗೊಂಡಿದ್ದಾರೆ.


ಸಮಿತಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷರಾಗಿದ್ದಾರೆ. ಉಳಿದಂತೆ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್, ಸತೀಶ್ ಜಾರಕಿಹೋಳಿ, ಸಂತೋಷ್ ಎಸ್.ಲಾಡ್, ಡಾ.ಶರಣಪ್ರಕಾಶ್ ರುದ್ರಪ್ಪಪಾಟೀಲ್, ರಾಜ್ಯ ಸಭಾ ಸದಸ್ಯ ಜಿ.ಸಿ ಚಂದ್ರಶೇಖರ್, ವಿಧಾನ ಸಭಾ ಸದಸ್ಯರಾದ ಡಾ.ರೂಪಕಲಾ ಎಂ ಹಾಗೂ ವಿ.ಆರ್ ಸುದರ್ಶನ್ ಇದ್ದಾರೆ.

Related posts

ಬ್ರಹ್ಮಾನಂದ ಶ್ರೀ ಯವರಿಂದ ಕನ್ಯಾಡಿ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿಯಿಂದ ಸೇವಾಭಾರತಿ ಸಂಸ್ಥೆಗೆ ಉಪಕರಣಗಳ ಹಸ್ತಾಂತರ

Suddi Udaya

ಉಜಿರೆ: ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಬೆಳ್ತಂಗಡಿ ಟೀಮ್ ನವಭಾರತ್ ವತಿಯಿಂದ ದಿ. ತುಷಾರ್. ಕೆ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya

ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ ಸ್ವೀಕರಿಸಿದ ಮೋಹನ್ ಕುಮಾರ್ ಗೆ ಗೌರವ

Suddi Udaya

ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ನಾವರ, ಉಪಾಧ್ಯಕ್ಷರಾಗಿ ಶುಭಕರ ಪೂಜಾರಿ

Suddi Udaya
error: Content is protected !!