September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ಬೆಳ್ತಂಗಡಿ: ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ- 2025

ಬೆಳ್ತಂಗಡಿ:ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ- 2025 ಕಾರ್ಯಕ್ರಮದ ಉದ್ಘಾಡನೆಯು ಮಾ.17 ರಂದು ನಡೆಯಿತು.

ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬವನ್ನು ಬೆಂಗಳೂರು ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಉದ್ಘಾಟಿಸಿ ನಮ್ಮ ಯಶಸ್ವಿನ ಹೆಜ್ಜೆಗೆ ಶಿಕ್ಷಣ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಸುರೇಶ್ ವಿ ವಹಿಸಿ ನಮ್ಮ ಕಾಲೇಜಿನ ಅಂದ ಚಂದವನ್ನು ಮಾಜಿ ಶಾಸಕ ವಸಂತ ಬಂಗೇರ ಹಾಗೂ ಶಾಸಕ ಹರೀಶ್ ಪೂಂಜರವರು ಹೆಚ್ಚಿಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸೂಪರ್ ಹಿಟ್ ದಸ್ಕತ್ ತುಳು ಚಿತ್ರದ ನಿರ್ದೇಶಕ ಅನೀಶ್ ಅಮೀನ್ ವೇಣೂರು ಮಾತನಾಡಿ ಈ ಕಾಲೇಜಿನ ಬಗ್ಗೆ ಸಾವಿರಾರು ನೆನಪುಗಳಿವೆ ಎಂದರು.

ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಡಾ.ಕುಶಾಲಪ್ಪ ಎಸ್,ಸಹ ಸಂಯೋಜಕರಾದ ಡಾ.ರವಿ ಎಂ.ಎನ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವೈಲೆಟ್ ಮೋರಾಸ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್,ಅವಿನ್ಯ ಸಂಯೋಜಕಿ ಅನನ್ಯ ಎಸ್ ಜೈನ್,ಸಾಂಸ್ಕೃತಿಕ ಸಂಯೋಜಕಿ ಬಿ.ನಯನಾ,ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪವನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಯುವ ನಿರ್ದೇಶಕ ಅನೀಶ್ ಅಮೀನ್ ಅವರನ್ನು ಸನ್ಮಾನಿಸಲಾಯಿತು ‌

ವಿದ್ಯಾರ್ಥಿಗಳಾದ ರೈಹಾನ ಮತ್ತು ಪ್ರತೀಕ್ ಕಾರ್ಯಕ್ರಮ ನಿರೂಪಿಸಿದರು.
ಸ್ಟೂಡೆಂಟ್ ವೆಲ್ಪೆರ್ ಆಫೀಸರ್ ಪ್ರೋ. ಪದ್ಮನಾಭ ಕೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿವೇದಿತಾ ವಂದಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವೀಲ್ ಚಯರ್ ವಿತರಣೆ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಸಚಿವ ಮಾಂಕಾಳ್ ಎಸ್. ವೈದ್ಯ ಭೇಟಿ

Suddi Udaya

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಘಟಕದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಂಗಳೂರು: ಕೊಡಗು ಮತ್ತು ದ.ಕ. ಗೌಡ ಸಮಾಜದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ “ಕಲಾ ಐಸಿರಿ”

Suddi Udaya

ಮುಂದಿನ ತಲೆಮಾರಿನ ಫಾರ್ಮಸಿಸ್ಟ್ ಗಳಿಗೆ ವೃತ್ತಿ ಮಾರ್ಗದರ್ಶನ: ಪ್ರಸನ್ನಾ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಪ್ರೇರಣಾದಾಯಕ ಸೆಮಿನಾರ್

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya
error: Content is protected !!