ಉಜಿರೆ: ಹಿಂದೂಗಳ ವಿರುದ್ಧ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನು ವಿರೋಧಿಸಿ ಪೂಜ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳವರು ನೀಡಿದ ಹೇಳಿಕೆಯನ್ನು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಮತ್ತು ಎಂ.ಜಿ.ಹೆಗ್ಡೆ ಅವರು ಖಂಡಿಸಿರುವುದು ಸಖೇದಾಶ್ಚರ್ಯವುಂಟುಮಾಡಿದೆ.
ರಾಹುಲ್ ಅವರ ಹಿಂದು ಧರ್ಮದ ವಿರುದ್ಧದ ಹೇಳಿಕೆ ಮತ್ತು ರಾಮ ಮಂದಿರದ ವಿರುದ್ಧದ ಹೇಳಿಕೆಗಳನ್ನು ಒಬ್ಬ ಜವಾಬ್ದಾರಿಯುತ ಹಿಂದುವಾಗಿ ಪದ್ಮರಾಜ್ ಅವರೇ ಖಂಡಿಸಬೇಕಾಗಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಜೆಯಾಗಿ, ಓರ್ವ ಹಿಂದುವಾಗಿ ಪೇಜಾವರ ಶ್ರೀಗಳವರ ಹೇಳಿಕೆಗೆ ತಮ್ಮ ಬೆಂಬಲ ಸೂಚಿಸಬೇಕಾಗಿತ್ತು. ಸನಾತನ ಹಿಂದೂ ಧರ್ಮದ ಎಲ್ಲ ಸ್ವಾಮಿಗಳು, ಧಾರ್ಮಿಕ ಮುಖಂಡರುಗಳು ಅತ್ಯುಗ್ರ ಮಾತುಗಳಿಂದ ರಾಹುಲ್ ಅವರ ನಿಲುವನ್ನು ಖಂಡಿಸುತ್ತಿರುವಾಗ ಧರ್ಮವನ್ನು ರಕ್ಷಿಸುವ, ದೇಶದ ಅಭಿವೃದ್ಧಿಗೆ, ರಕ್ಷಣೆಗೆ ಸಹಾಯಕವಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು ಅಭಿವೃದ್ಧಿ ಮರೆತು ದೇಶ ರಕ್ಷಣೆಗೆ ಮಾರಕವಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಧರ್ಮ ನಿರ್ಮೂಲನೆ ಮಾಡ ಬೇಕೆಂದು ಹೇಳಿಕೊಂಡು ರಾಜಕೀಯಕ್ಕಾಗಿಯೇ ರಾಜಕೀಯ ಮಾಡುವ ರಾಹುಲ್ ಅವರ ಮಾತನ್ನು ಖಂಡಿಸಿ ಪೇಜಾವರ ಶ್ರೀಗಳವರು ನೀಡಿದ ಹೇಳಿಕೆಯನ್ನು ಸಮಸ್ತ ಹಿಂದೂ ಸಮಾಜ ಬೆಂಬಲಿಸಿ, , ಪದ್ಮರಾಜ್ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತದೆ ಪೂಜ್ಯ ಪೇಜಾವರ ಶ್ರೀಗಳವರು ಹಿಂದೂ ಧಾರ್ಮಿಕ ಮುಖಂಡರಾಗಿ, ಸಮಗ್ರ ಹಿಂದೂ ಸಮಾಜವನ್ನು ಮಾರ್ಗದರ್ಶನದಿಂದ ಮುನ್ನಡೆಸುವ ಸ್ವಾಮೀಜಿಗಳ ನಿಲುವನ್ನು ಸಮಗ್ರ ಹಿಂದೂ ಸಮಾಜ ಸ್ವಾಗತಿಸುತ್ತದೆ. ಹಿಂದೂ ಧರ್ಮವನ್ನು ಅವಹೇಳನ ಮಾಡಿರುವ ರಾಹುಲ್ ಗಾಂಧಿಯವರನ್ನು ವಿರೋಧಿಸಿರುವುದು ಸರಿಯಾಗಿಯೇ ಇರುತ್ತದೆ. ಈ ನಿಟ್ಟಿನಲ್ಲಿ ಪದ್ಮರಾಜ್ ಅವರು ಪೇಜಾವರ ಶ್ರೀಗಳವರ ವಿರುದ್ಧ ಮಾತನಾಡಿರುವುದು ಖೇದಕರ. ಅವರು ಶ್ರೀಗಳವರಲ್ಲಿ ಕ್ಷಮೆಕೋರಿ, ಬೆಂಬಲ ನೀಡಬೇಕಾಗಿತ್ತು. ಅವರ ಹೇಳಿಕೆಯನ್ನು ದ ಕ.ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡಿಸಿ ದೇವರು ಅವರಿಗೆ ಸದ್ಬುದ್ಧಿ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ| ಎಂ.ಎಂ.ದಯಾಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.