ಕಡಿರುದ್ಯಾವರ ಗ್ರಾಮದ ಕುಚ್ಚೂರು ಬೈಲು ಶ್ರೀವನದುರ್ಗಾದೇವಿ ದೇವಸ್ಥಾನದ ಗರ್ಭಗುಡಿಗೆ ನಿಧಿ ಕುಂಭ ಸಮರ್ಪಣೆ ಹಾಗೂ ಷಡಾಧಾರ ಮುಹೂರ್ತ ಕಾರ್ಯಕ್ರಮ ಜು.10 ರಂದು ಜರಗಿತು.
ಆಲಂಬಾಡಿ ಪದ್ಮನಾಭ ತಂತ್ರಿ ಹಾಗೂ ಶಿಲ್ಪಿ ವೆಂಕಟ್ರಮಣ ಆಚಾರ್ಯ ಮರ್ಕಂಜ ಇವರ ಮಾರ್ಗದರ್ಶನದಲ್ಲಿ ಕಾನರ್ಪದ ವಿಕ್ರಂ ಹೊಳ್ಳರ ಪೌರೋಹಿತ್ಯದಲ್ಲಿ ರಮೇಶ್ ಶಿಲ್ಪಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವನದುರ್ಗದೇವಿ ಟ್ರಸ್ಟ್ ಗೌರವಾಧ್ಯಕ್ಷ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ವಹಿಸಿದ್ದರು.
ಶ್ರೀ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸಗೌಡ ಕಡಿರುದ್ಯಾವರ ಗ್ರಾಪಂ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಎಸ್ ಕೆ ಡಿ ಆರ್ ಡಿ ಪಿಯ ಮೇಲ್ವಿಚಾರಕ ಜನಾರ್ದನ ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ಪ್ರೇಮಾನಂದ ಫಡಕೆ, ಬಿ ಯಶೋಧರ ಬಲ್ಲಾಳ್ ಬಂಗಾಡಿ, ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯರಾದ ಸೀತಾರಾಮ ಕೊಡಪಟ್ಯ, ಲೋಕೇಶ್ ಗೌಡ ಶಾಂತಿದಡಿ,ಬಾಬು ನಾಯ್ಕ ಮಲ್ಲಡ್ಕ, ಕೃಷ್ಣಪ್ಪ ಪೂಜಾರಿ ಮಾನೋಡಿ, ಐತಪ್ಪ ಮಲೆಕುಡಿಯ,ಶ್ರೀಧರ ಗೌಡ , ಪ್ರಸಾದ್ ಗೌಡ,ದರ್ಣಪ್ಪ ಗೌಡ ಶೆಟ್ಟಿಪಾಲು, ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ಮಂಜುನಾಥ್, ಕಾರ್ಯದರ್ಶಿ ನಳಿನಿ ಶ್ರೀಧರ ಗೌಡ,ಡೀಕಮ್ಮ, ಪ್ರಮುಖರಾದ ಕೆ. ಸತೀಶ್ ಕಾಮತ್,ವಳಂಬ್ರ ವಿನಯ ಚಂದ್ರ ಗೌಡ ಸಿರಿಬೈಲು ರಂಗನಾಥ ಹೆಬ್ಬಾರ್ ಮತ್ತಿತರರು ಭಾಗವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿ ಉದ್ದಾರ, ಭವ್ಯಶ್ರೀ ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕುಚ್ಚೂರು ಮಂಜುನಾಥ ಗೌಡ ವಂದಿಸಿದರು.
ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ರೂ. 50,000, ಹಾಗೂ ಬೆಳಾಲು ಶ್ರೀನಿವಾಸ ಗೌಡ ರೂ.25,000 ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದರು.