39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಶಾಲಾ ಕಾಲೇಜು

ಸಿಎ ಪರೀಕ್ಷೆಯಲ್ಲಿ ಸುಕನ್ಯಾ ಕಾಮತ್ ಉತ್ತೀರ್ಣ

ಬೆಳ್ತಂಗಡಿ :ಅಖಿಲ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ 2024 ಇದರ ವತಿಯಿಂದ ಮೇ ತಿಂಗಳಿನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕು. ಸುಕನ್ಯಾ ಕಾಮತ್ (ಎಸ್.ಡಿ.ಎಂ ಮಹಿಳಾ ಐಟಿಐ ಉಜಿರೆಯ ಪ್ರಾಂಶುಪಾಲ ಶ್ರೀ ವಿ. ಪ್ರಕಾಶ್ ಕಾಮತ್ ಮತ್ತು ಶ್ರೀಮತಿ ರಾಧಿಕಾ ಕಾಮತ್ ಇವರ ಪ್ರಥಮ ಪುತ್ರಿ) ಇವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಇವರು ಸಿ ಎ. ಕೆ.ದಾಮೋದರ ನಾಯಕ್ ಇವರ ದಾಮೋದರ ಆಂಡ್ ಕೊ ಇಲ್ಲಿ ಆಪ್ಟಿಕಲ್ ಶಿಪ್ ತರಬೇತಿ ಪಡೆದಿದ್ದು ಪ್ರಸ್ತುತ ಅಲ್ಲೇ ಉದ್ಯೋಗದಲ್ಲಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಕು. ಸಿ ಎ. ಸುಕನ್ಯಾರವರು ಭರತನಾಟ್ಯ ವಿದ್ವತ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಸೀನಿಯರ್ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿರುತ್ತಾರೆ. ಅನೇಕ ಪತ್ರಿಕೆಗಳಲ್ಲಿ ಕತೆ, ಕವನ ಬರೆಯುವ ಹವ್ಯಾಸ ಇರುವ ಇವರು ಅನೇಕ ಪ್ರಶಸ್ತಿಯನ್ನು ಪಡೆದಿರುತ್ತಾಳೆ.
ಇವರು ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ, ಬೆಳ್ತಂಗಡಿ ಹಾಗೂ ಎಸ್.ಡಿ ಎಂ. ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ.

Related posts

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

ಬಿಜೆಪಿ ರಾಜ್ಯ ಯುವಮೋರ್ಚಾ ಘಟಕದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಉಜಿರೆ: ಅಮೃತ್ ಸಿಲ್ಕ್ಸ್ ರೆಡಿಮೇಡ್ಸ್ & ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ವಿಜಯೋತ್ಸವ’: ರೂ.2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕೀ ಡ್ರಾ ಕೂಪನ್

Suddi Udaya

ಲಾಯಿಲ: ಪಿ.ಎಮ್ ವಿಶ್ವಕರ್ಮ ಯೋಜನೆಯ ಮಾಹಿತಿ ಹಾಗೂ ಆನ್ಲೈನ್ ನೋಂದಾವಣೆ ಕಾರ್ಯಕ್ರಮ

Suddi Udaya

ಉಜಿರೆಯ ಎಸ್ ಎಲ್ ವಿ ಕನ್ಸ್ಟ್ರಕ್ಷನ್ ನ ಸಿವಿಲ್ ಇಂಜಿನಿಯರ್ ಸಂಪತ್ ರತ್ನ ರಾವ್ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!