32.9 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರವಾಯನಕೆರೆ: ವಿದ್ವತ್ ಕಾಲೇಜಿನಲ್ಲಿ ಆಂಗ್ಲ ಭಾಷೆ ಉಪನ್ಯಾಸಕರ ಕಾರ್ಯಾಗಾರ

ಗುರವಾಯನಕೆರೆ: ದಕ್ಷಿಣ ಕನ್ನಡ ಜಿಲ್ಲಾ ಆಂಗ್ಲ ಭಾಷೆ ಉಪನ್ಯಾಸಕರ ಸಂಘದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವು ದಕ್ಷಿಣ ಕನ್ನಡ ಜಿಲ್ಲೆ ಪ್ರಾಂಶುಪಾಲರ ಸಂಘ ಹಾಗೂ ವಿದ್ವತ್ ಪದವಿಪೂರ್ವ ಕಾಲೇಜು ಗುರುವಾಯನಕೆರೆ ಇವರ ಸಹಭಾಗಿತ್ವದಲ್ಲಿ ಗುರುವಾಯನಕೆರೆ ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಜು.11ರಂದು ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಎನ್. ಸುವರ್ಣ ವಹಿಸಿಕೊಂಡು , ಉಪನ್ಯಾಸಕರ ಸಂಘ ಚಟುವಟಿಕೆಯುಕ್ತವಾಗಿರಬೇಕು ಹಾಗೂ ಇಂತಹ ಕಾರ್ಯಾಗಾರವು ಉಪನ್ಯಾಸಕರ ವೃತ್ತಿಗೆ ಪೂರಕವಾಗುತ್ತದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ವಿದ್ವತ್ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಾದ ಸುಭಾಷ್ ಚಂದ್ರ ಶೆಟ್ಟಿ ಮಾತನಾಡಿ, ತಮ್ಮ ಸಂಸ್ಥೆಯಲ್ಲಿ ಈ ಅವಕಾಶ ನೀಡಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರಾದ ಸೋಮಶೇಖರ್ ನಾಯಕ್, ಪ್ರಾಂಶುಪಾಲರು , ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಮಣ್ಯ ಇವರು ಪ್ರಸ್ತಾವನೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿದ್ವತ್ ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ , ಕೋಶಾಧಿಕಾರಿ ಕಾಶೀನಾಥ್ ಮತ್ತು ಪ್ರಾಂಶುಪಾಲರಾದ ಡಾ. ಜಯೇಂದ್ರ ಬದ್ಯಾನ್ ಮತ್ತು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ವಿವೇಕಾನಂದ ಮುಂಡಾಜೆ ಪದವಿ ಪೂರ್ವ ಕಾಲೇಜು ಇವರು ಉಪಸ್ಥಿತರಿದ್ದರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವಿಕಾಸ್ ಹೆಬ್ಬಾರ್ ಸ್ವಾಗತಿಸಿದರು. ವಾಣಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ತರಬೇತಿ ಸಂಯೋಜಕಿ ಅನುರಾಧ ಕೆ. ರಾವ್ ನಿರೂಪಿಸಿ, ಸುಳ್ಯ ಗಾಂಧಿನಗರ ಸರ್ಕಾರಿ ಪ.ಪೂ. ಕಾಲೇಜು, ಉಪನ್ಯಾಸಕ ಅಬ್ದುಲ್ ಸಮಾದ್, ವಂದಿಸಿದರು.

ಕಾರ್ಯಕ್ರಮದ ಬಳಿಕ ವಿವಿಧ ವಿಷಯಗಳಲ್ಲಿ ಕಾರ್ಯಾಗಾರವು ನಡೆಯಿತು. ವಿದ್ವತ್ ಕಾಲೇಜಿನ ಮುಖ್ಯಸ್ಥರಾದ ಸುಭಾಷ್ ಚಂದ್ರ ಶೆಟ್ಟಿ ಹಾಗೂ ವಿವಿಧ ಸಾಧನೆಗೈದವರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

Related posts

ಜ.24 ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರಾರಂಭ

Suddi Udaya

ಕಾಪಿನಡ್ಕ: ರಸ್ತೆ ಅಪಘಾತದಲ್ಲಿ ದೊಡ್ಡ ದುರಂತವನ್ನು ತಪ್ಪಿಸಿದ ಟಿಪ್ಪರ್ ಚಾಲಕ,

Suddi Udaya

ಶಿರ್ಲಾಲು ಗ್ರಾಮ ಸಭೆ: ಶಿರ್ಲಾಲುವಿನಲ್ಲಿರುವ ಗೋಮಾಲಾ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ಧಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya

ಯೋಗಾಸನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ಮೋಹಿತ್ ತೃತೀಯ ಸ್ಥಾನ

Suddi Udaya

ಲೋಕಸಭೆ ಚುನಾವಣೆ ಹಿನ್ನಲೆ: ಬೆಳ್ತಂಗಡಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕ‌ರ್ ಮತ್ತು ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ. ವರ್ಗಾವಣೆ

Suddi Udaya

ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಸಾವು

Suddi Udaya
error: Content is protected !!