April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪೆರಿಂಜೆ: ನಿವೃತ್ತ ಶಿಕ್ಷಕಿ ಶಶಿಪ್ರಭಾರವರಿಗೆ ಬೀಳ್ಕೊಡುಗೆ: ನಿವೃತ್ತ ಶಿಕ್ಷಕಿಯಿಂದ ಪರಿಸರ ಕಾಳಜಿ ವಹಿಸಲು ಮಕ್ಕಳಿಗೆ ಹಣ್ಣಿನ ಗಿಡಗಳ ವಿತರಣೆ

ಪೆರಿಂಜೆ: ಸ.ಹಿ.ಪ್ರಾ. ಶಾಲೆ ಪೆರಿಂಜೆಯಲ್ಲಿ 22 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಶಿಕ್ಷಕಿ ಶಶಿಪ್ರಭಾ ಇವರ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಜರುಗಿತು.


ಈ ಸಂದರ್ಭ ಗ್ರಾಮ ಪಂಚಾಯತ್ ಹೊಸಂಗಡಿಯ ಸದಸ್ಯರಾದ ಹರಿಪ್ರಸಾದ್, ಪ್ರಕಾಶ್ ದೇವಾಡಿಗ, ಶಾಂತಾ, ಬಿ ಆಯ್ ಆರ್ಟಿ ಜಗದೀಶ್, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಆಲಿಯಬ್ಬ, ರಾಜೇಶ್ ಕುಮಾರ್ ಪಿ.ವಿ, ನಿವೃತ್ತ ಮುಖ್ಯ ಶಿಕ್ಷಕರಾದ ಬೂಬ ಮಾಸ್ತರ್, ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಿಠ್ಠಲ ಸಿ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷರಾದ ಶೇಖರ ಕುಲಾಲ್, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.


ಶಿಕ್ಷಕರಾದ ವಿಶ್ವನಾಥ ಗೌಡ, ಶಶಿಪ್ರಭಾ ಅವರ ಜೊತೆಗಿನ ಒಡನಾಟದ ಅನುಭವ ಮೆಲುಕುಗೈದರು. ವಿದ್ಯಾರ್ಥಿಗಳಾದ ಕಿಶನ್, ಕುಶಿ ಅನಿಸಿಕೆ ಹಂಚಿಕೊಂಡರು. ಸಚ್ಚಿದಾನಂದ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ನೀನಾ ಕುವೆಲ್ಲೊ ಸ್ವಾಗತಿಸಿ, ಪುಷ್ಪ ಧನ್ಯವಾದಗೈದರು.

ಮಕ್ಕಳಿಗೆ ಸಿಹಿ ಊಟದ ಜೊತೆಗೆ ಪರಿಸರ ಕಾಳಜಿ ಬೆಳೆಸುವ ದೃಷ್ಟಿಯಿಂದ ಗಿಡಗಳನ್ನು ವಿತರಿಸಿ ಸಂಭ್ರಮಿಸಲಾಯಿತು.

Related posts

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಕಲ್ಮಂಜ ಸ.ಹಿ.ಪ್ರಾ. ಶಾಲೆ ಪೈಂಟಿಂಗ್, ಕಾಮಗಾರಿ ವೀಕ್ಷಣೆ

Suddi Udaya

ಗುರುವಾಯನಕೆರೆಯಲ್ಲಿ ಪತ್ತೆಯಾದ ಅಪರಿಚಿತ ಗಂಡಸಿನ ಗುರುತು ಪತ್ತೆಗೆ ಮನವಿ

Suddi Udaya

ಸೋಣಂದೂರು: ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ

Suddi Udaya

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯಶಸ್ವಿ ದ್ವಿತೀಯ ಸ್ಥಾನ

Suddi Udaya

ಬಳಂಜ: ಅಸೌಖ್ಯದಿಂದ ಮಹಿಳೆ ಸಾವು

Suddi Udaya
error: Content is protected !!