ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆ ಪರಿಸರದ ಶಾಲಾ ಕಾಲೇಜುಗಳಲ್ಲಿ ಡೆಂಗ್ಯೂ ತಡೆಗಟ್ಟುವ ಬಗ್ಗೆ ಮಾಹಿತಿ ನೀಡುವ ಅಭಿಯಾನ ನಡೆಯಿತು.
ಸ್ವಯಂ ಸೇವಕರರಾದ ಐಶ್ವರ್ಯ , ಧನುಶ್ರೀ , ಆದಿತ್ಯ , ಯಕ್ಷಿತ್, ಹರ್ಷ ಜೈನ್ , ಭಾರ್ಗವಿ ಭಟ್ , ಲಿಖಿತ್ , ಗಂಭೀರ್ , ರಾಶಿಕಾ , ಮೌಲ್ಯ , ಗಾನವಿ, ಸಂತೋಷ್ , ನಿಕ್ಷಿತ್, ಶಾಶ್ವಿತ್, ಶ್ರೇಯಾ ಹಾಗೂ ಶ್ರಮ ಅವರು ಅಭಿಯಾನದಲ್ಲಿ ಪಾಲ್ಗೊಂಡು ಡೆಂಗ್ಯೂ ಜ್ವರದ ಲಕ್ಷಣಗಳು , ತಡೆಗಟ್ಟುವ ವಿಧಾನ ಹಾಗೂ ಪರಿಹಾರೋಪಾಯಗಳನ್ನು ತಿಳಿಸಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಮಾರ್ಗದರ್ಶನ ನೀಡಿದರು.