23.4 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಿಟ್ಟಡೆ ಕುಂಭಶ್ರೀ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜು ನಿಟ್ಟಡೆ ಇಲ್ಲಿನ ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮವು ಜು.11 ರಂದು ನಡೆಯಿತು.

ಕಾರ್ಯಕ್ರಮವನ್ನು ಪೆರಿಂಜೆ ಎಸ್ ಡಿ ಎಮ್ ಅನುದಾನಿತ ಪ್ರೌಢಶಾಲೆ ಮುಖ್ಯೋಪಾದ್ಯಾಯರು ಮುಕುಂದ, ಹಾಗೂ ವೇಣೂರು ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಂತ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಕುಂದ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಜೀವನವು ಅಮೂಲ್ಯವಾದದ್ದು ಜೀವನದ ಮುಂದಿನ ವಿದ್ಯಾಭ್ಯಾಸದಲ್ಲೂ ಉತ್ತಮ ವ್ಯಕ್ತಿತ್ವವನ್ನು ಅಳವಡಿಸುವುದರಲ್ಲಿ ಪಿಯು ವಿದ್ಯಾಭ್ಯಾಸವು ಬಹು ಪ್ರಾಮುಖ್ಯವಾದುದು ಎಂದು ತಿಳಿಸಿದರು.

ಮತ್ತೋರ್ವ ಅತಿಥಿ ಜಯಂತ್ ಪೂಜಾರಿ ಮಾತನಾಡಿ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖವಾದದ್ದು ಎಂದು ಹಾರೈಸಿದರು.

ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಹೊಸ ಆಲೋಚನೆಗಳು ಇದ್ದೇ ಇರುತ್ತದೆ ಹಾಗೂ ಸಿಕ್ಕಿದ ಅವಕಾಶವನ್ನು ಹೇಗೆ ತನ್ನ ಜೀವನದಲ್ಲಿ ಅಳವಡಿಸುವುದು ಎಂದು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂಭಶ್ರೀ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ ಎಚ್ ವಿದ್ಯಾರ್ಥಿಗಳಿಗೆ ಪ್ರೇರಕವಾದ ನುಡಿಮುತ್ತುಗಳೊಂದಿಗೆ ತನ್ನ ಜೀವನದ ವಿದ್ಯಾಭ್ಯಾಸವನ್ನು ಹಾಗೂ ಗುರುಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಲೇಜಿನ ನಾಯಕಿಯಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಮೀಕ್ಷ, ಉಪನಾಯಕನಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಶಶಾಂಕ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶಾನ್ ಉಳಿದಂತೆ 18 ವಿದ್ಯಾರ್ಥಿಗಳು ವಿವಿಧ ಬಗೆಯ ನಾಯಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಓಮನ ಎಂ ಎ ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಮನೋಜ್ ನಿರೂಪಿಸಿ, ವಾಣಿಜ್ಯ ವಿಭಾಗದ ಮೇಘಶ್ರೀ ಸ್ವಾಗತಿಸಿ,ರಸಾಯನಶಾಸ್ತ್ರ ವಿಭಾಗದ ಸುಶ್ಮಿತ ಧನ್ಯವಾದ ಸಮರ್ಪಿಸಿದರು.

Related posts

ವೈದ್ಯಕೀಯ ದಾಖಲೆ ವಿಷಯದಲ್ಲಿ ತಂದೆ-ಮಗನ ನಡುವೆ ಜಗಳ: ಚೂರಿಯಿಂದ ಇರಿದು ಮಗನನ್ನು ಕೊಲೆ ಗೈದ ತಂದೆ

Suddi Udaya

ಕಾಶಿಪಟ್ಣ ಕೇಳದಪೇಟೆ ಮಸೀದಿಗೆ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಡಿ. 21: ಬೆಳ್ತಂಗಡಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ

Suddi Udaya

ಧರ್ಮಸ್ಥಳ : ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾಮಧೇನು ಸಂಘದ ಸದಸ್ಯರಿಂದ ಆಟಿಡೊಂಜಿ ದಿನ

Suddi Udaya

ಬೆಳ್ತಂಗಡಿ ಶ್ರೀ ಧ. ಆಂ.ಮಾ. ಶಾಲೆಗೆ ರಾಷ್ಟ್ರೀಯ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಿರ್ದೇಶಕ ಡಾ. ಕೆ. ಶರ್ಮ ಭೇಟಿ

Suddi Udaya

ಬೆಳ್ತಂಗಡಿ ಅಲ್ಪಸಂಖ್ಯಾತ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಸಚಿವ ಬಿ ಜೆಡ್ ಜಮೀರ್ ಅಹಮ್ಮದ್ ಖಾನ್ ರವರಿಗೆ ರಕ್ಷಿತ್ ಶಿವಾರಾಂ ರಿಂದ ಮನವಿ

Suddi Udaya
error: Content is protected !!