ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘದ ಮಹಾಸಭೆ: ರೂ.3.84 ಕೋಟಿ ನಿವ್ವಳ ಲಾಭ – ಶೇ.15 ಡಿವಿಡೆಂಟ್ ಘೋಷಣೆ

Suddi Udaya

ಬೆಳ್ತಂಗಡಿ : ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘದ 2023-24ನೇ ವಾರ್ಷಿಕ ಮಹಾಸಭೆಯು ಜು.14ರಂದು ಸಂಘದ ನೂತನ ವಾಣಿಜ್ಯ ಸಂಕೀರ್ಣ ಶ್ರೀ ಗುರು ಸಾನಿಧ್ಯದಲ್ಲಿ ಸಂಘದ ಉಪಾಧ್ಯಕ್ಷ ಭಗೀರಥ ಜಿ. ಇವರು ಅಧ್ಯಕ್ಷತೆಯಲ್ಲಿ ಜರಗಿತು.

ಸಂಘ 2023- 24 ನೇ ಸಾಲಿನಲ್ಲಿ 1,200 ಕೋಟಿ ರೂ. ವ್ಯವಹಾರ ನಡೆಸಿ 3,84,01,303.08 ರೂ. ನಿವ್ವಳ ಲಾಭ ಗಳಿಸಿದೆ. ಈಗಾಗಲೇ ಸಂಘವು 22 ಶಾಖೆಗಳನ್ನು ಹೊಂದಿದ್ದು, ಪ್ರಸ್ತುತ 82 ಮಂದಿ ಸಿಬಂದಿಯಿದ್ದು, ಸುಮಾರು 42,000 ಕ್ಕೂ ಮಿಕ್ಕಿ ಸದಸ್ಯತನವನ್ನು ಹೊಂದಿದೆ. 193 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಿ, 167 ಕೋಟಿ ರೂ. ಸಾಲವನ್ನು ವಿತರಿಸಿ, 212 ಕೋಟಿ ದುಡಿಯುವ ಬಂಡವಾಳದೊಂದಿಗೆ, ಸದಸ್ಯರಿಗೆ ನಿರಂತರ ಶೇ.15ರಷ್ಟು ಲಾಭಂಶ ನೀಡುತ್ತಿರುವ ಎ ಶ್ರೇಣಿಯ ಸಂಘವಾಗಿದೆ ಎಂದು ಉಪಾಧ್ಯಕ್ಷರು ತಿಳಿಸಿದರು

ಈ ವಷ೯ ಮೂರು ಶಾಖೆಗಳ ಆರಂಭ:.

ಸಂಘವು 2024-25ರಲ್ಲಿ ಹೊಸದಾಗಿ ಒಟ್ಟು 3 ಶಾಖೆಗಳು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಸೇವೆಯನ್ನು ನೀಡಲಾಗುತ್ತಿದೆ. ಗ್ರಾಹಕರಿಗೆ ಆರ್‍. ಟಿ.ಜಿ.ಎಸ್, ನೆಪ್ಟ್, ಇ ಸ್ಟ್ಯಾಂಪ್, ಆರ್‍.ಟಿ.ಸಿ, ಗ್ರಾಹಕರಿಗೆ ಲಾಕರ್ ಸೇವೆ ನೀಡಲಾಗುತ್ತಿದೆ. ತಾಲೂಕಿನಲ್ಲೇ ಪ್ರಥಮವಾಗಿ ಸಂಘದ ಹೆಸರಿನಲ್ಲಿ ತನ್ನದೇ ಆದ ಐಎಪ್‍ಎಸ್‍ಸಿ ಕೋಡ್ ಹೊಂದಿದ್ದು, ಇನ್ನು ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಅಳವಡಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಉಪಾಧ್ಯಕ್ಷರು ಹೇಳಿದರು.

ಸಾಮಾಜಿಕ ಚಟುವಟಿಕೆ:
ಸಂಘವು ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಲಾಗಿದ್ದು, ಓರ್ವ ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚ ಹಾಗೂ ಶ್ರೀ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ 111 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ 6 ರಿಂದ 7 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತಿದೆ.

ಸಂಘದ ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ
ಕಂಡೆತ್ಯಾರು ಪ್ರಸ್ತಾವಿಸಿ, ಮಹಾ ಸಭೆಯ ವಿವರ ಮಂಡಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ ಕುಮಾರ್ ಸಾಧನೆ ಗೈದ ಶಾಖೆಯ, ಸಮ್ಮಾನದ ವಿವರ ನೀಡಿದರು.

ನಿರ್ದೇಶಕರುಗಳಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ., ಚಂದ್ರಶೇಖರ್, ಎಚ್.ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರು, ಜಯವಿಕ್ರಮ್ ಪಿ., ಧರಣೇಂದ್ರ ಕುಮಾರ್, ಆನಂದ ಪೂಜಾರಿ ಕೆ. ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಅಪ೯ಣೆ :

ಕಾರ್ಯಕ್ರಮದ ಮೊದಲು ಅಗಲಿದ ಮಾಜಿ ಶಾಸಕ ಸಂಘದ ಪ್ರಾರಂಭದ ಮುಖ್ಯ ಪ್ರವರ್ತಕ ಕೆ.ವಸಂತ ಬಂಗೇರ ನಿರ್ದೇಶಕ ಶೇಖರ ಬಂಗೇರ, ಸಿಬಂದಿ
ಲತನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಾಧಕರಿಗೆ ಸನ್ಮಾನ :

ವ್ಯವಹಾರದಲ್ಲಿ ಸಾಧನೆಗೈದ ಶಾಖೆಗಳನ್ನು, ಹೆಚ್ಚು ಮೊತ್ತ
ದೈನಿಕ ಠೇವಣಿ ಸಂಗ್ರಹಕರನ್ನು ವೈಯಕ್ತಿಕ ಸಾಧಕ ಸಿಬಂದಿಗಳನ್ನು ಗೌರವಿಸಲಾಯಿತು. ನಿರ್ದೇಶಕ ಡಾ. ರಾಜಾರಾಮ ಕೆ.ಬಿ. ಸ್ವಾಗತಿಸಿದರು. ನಿರ್ದೇಶಕ ಜಯವಿಕ್ರಮ್ ವಂದಿಸಿದರು, ಸಿಬಂದಿ ಸ್ವಾತಿ ನಿರೂಪಿಸಿದರು.

Leave a Comment

error: Content is protected !!