25.7 C
ಪುತ್ತೂರು, ಬೆಳ್ತಂಗಡಿ
March 7, 2026
ಧಾರ್ಮಿಕ

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರ ದಲ್ಲಿ ಅಷ್ಟಾಹಿನಿಕ ಪರ್ವ ಪೂಜಾ ಕಾರ್ಯಕ್ರಮ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ. ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರ ಶಿಶಿಲದಲ್ಲಿ ಅಷ್ಟಾಹಿನಿಕ ಪರ್ವ ಪೂಜಾ ಕಾರ್ಯಕ್ರಮ ಜರಗಿತು.
ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ೧00೮. ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪರಮಪೂಜ್ಯ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಕಾರ್ಕಳ ಇವರ ಶುಭ ಆಶೀರ್ವಾದದೊಂದಿಗೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ. ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಇಂದು ಅಷ್ಣಹಿನಿಕಾ ಪೂಜಾ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ಪ್ರಾರಂಭವಾಯಿತು.

ಶ್ರೀಮತಿ ಸುಗುಣ ಎಸ್ ಡಿ ಶೆಟ್ಟಿ ಉಜಿರೆಯವರ ಎರಡನೇ ಮಗಳಾದ ಶ್ರೀಮತಿ ಪ್ರಗತಿ ರಾಜಿತ್ ಶೆಟ್ಟಿ ಯವರು ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು ಕೊಲ್ಲಾಪುರ ಸಮೀಪ ಉದ್ಗಾವ್ ನಲ್ಲಿ ಆಚಾರ್ಯ ಶ್ರೀ ೧೦೮ ವಿಶುದ್ದ ಸಾಗರ ಮುನಿ ಮಹಾರಾಜರ ಅಮೃತ ಹಸ್ತದಿಂದ ನಂದೀಶ್ವರ ಮಂಟಪಕ್ಕೆಲಘು ಪಂಚಕಲ್ಯಾಣ ನೆರವೇರಿದ್ದು

ಇಂದು ಆಷಾಢ ಮಾಸದ ಅಷ್ಟಾಹಿಣಿಕ ಪರ್ವದ ಮೊದಲ ಅಷ್ಟಮಿಯ ದಿನದಂದು ಬೆಳಿಗ್ಗೆ 10.30ಗಂಟೆಗೆ ಜಿನ ಮಂದಿರದಲ್ಲಿ. ವಿಶೇಷ ಆರಾಧನೆ ಹಾಗೂ ವಿಶೇಷ. ಪೂಜೆಗಳು ನೆರವೇರಿದ ನಂತರ ವಿರಾಜಮಾನಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಹಲವಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು .ಇದೇ ಸಂದರ್ಭದಲ್ಲಿ ಉಜಿರೆಯ ಎಸ್ ಡಿ.ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Related posts

ಕೊಕ್ಕಡ ಪರಿಸರದಲ್ಲಿ ಭೀಕರ ಬಿರುಗಾಳಿ ಮಳೆ: ಮರ ಉರುಳಿ ಬಿದ್ದರೂ ಹಾನಿಯಾಗದ ದೈವದ ಗುಡಿ: ದೈವಗಳ ಕಾನಿ೯ಕ ಭಕ್ತರ‌ ಅನಿಸಿಕೆ

Suddi Udaya

ಫೆ.15 (ನಾಳೆ) ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಲ್ಲಿ ರೂ.26 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ “ಅಕ್ಷಯ ಪಾಕಶಾಲೆ” ಲೋಕಾರ್ಪಣೆ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಮಂಗಳೂರು ಸಂಸದ ಬ್ರಿಜೇಶ್ ಚೌಟ ಹಾಗೂ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರ ಅಧ್ಯಕ್ಷ ಚಿತ್ತರಂಜನ್

Suddi Udaya

ಏ.23-24: ನಾಗ-ರಕ್ತೇಶ್ವರಿ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಕಾಳಮ್ಮ, ಮಹಮ್ಮಾಯಿ-ಬೈರವ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ

Suddi Udaya

ಶಿಶಿಲ: ನವರಾತ್ರಿ ಪ್ರಯುಕ್ತ ಕುಣಿತ ಭಜನಾ ಸಪ್ತಾಹ ಶುಭಾರಂಭ

Suddi Udaya
error: Content is protected !!