September 6, 2026
ಗ್ರಾಮಾಂತರ ಸುದ್ದಿ

ಚಾರ್ಮಾಡಿ: ಆಡಿಮಾರು ಇಂದಿರಾ ಮೋಹನ್ ಮನೆಗೆ ಬಿದ್ದ ಬೃಹತ್ ಮರ:ಶೌರ್ಯ ಘಟಕದ ಸ್ವಯಂ ಸೇವಕರಿಂದ ತೆರವುಗೊಳಿಸುವ ಕಾರ್ಯ

ಬೆಳ್ತಂಗಡಿ:,ನಿನ್ನೆ ರಾತ್ರಿ ವೇಳೆ ತೀವ್ರ ಗಾಳಿ ಮಳೆಗೆ ಚಾರ್ಮಾಡಿ ಗ್ರಾಮದ ಆಡಿಮಾರು ಇಂದಿರಾ ಮೋಹನ್ ಇವರ ಮನೆಗೆ ಮಧ್ಯರಾತ್ರಿ 2.15ಕ್ಕೆ ಬೃಹತ್ ಮರ ಬಿದ್ದಿದ್ದು ಜು.14ರಂದು ಬೆಳಗ್ಗೆ 6ಗಂಟೆಗೆ ನೆರಿಯ ತುರ್ತು ಸ್ವಂದನ ಘಟಕದ ಸದಸ್ಯರಾದ ನಾಗೇಶ್ ಬಿ ಇವರಿಗೆ ಈ ವಿಚಾರ ಸ್ಥಳೀಯ ಸದಸ್ಯರ ಮೂಲಕ ತಿಳಿದು, ನೆರಿಯ, ಅರಸಿನಮಕ್ಕಿ ಉಜಿರೆ ಬೆಳಾಲು ಶೌರ್ಯ ಘಟಕದ ಸ್ವಯಂ ಸೇವಕರು ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರು.

ಬಳಿಕ ಅರಣ್ಯಧಿಕಾರಿ ನಾಗೇಶ್,ಗೋಪಾಲ್,ರವಿ ಸ್ಥಳಕ್ಕೆ ಕರೆಸಿಕೊಂಡು ಅವರೊಂದಿಗೆ ಚರ್ಚಿಸಿ ಮನೆಗೆ ಬಿದ್ದ ಮರ ತೆರವು ಗೊಳಿಸಲಾಯಿತು ಹಾಗೂ ಚಾರ್ಮಾಡಿ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಮನೆಗೆ ಸಿಮೆಂಟ್ ಶೀಟ್ ಹಾಗೂ ಸಿಮೆಂಟ್ ಕಂಬ ಒದಗಿಸಿ ಕೊಟ್ಟರು ಅದನ್ನು ತುರ್ತು ಸ್ವಂದನ ತಂಡ ತಾತ್ಕಾಲಿಕ ಮನೆ ರಚನೆ ಮಾಡಿ ವಾಸ್ತವಕ್ಕೆ ಅನುಕೂಲ ಮಾಡಿ ಕೊಟ್ಟಿರುತ್ತಾರೆ.
ಈ ದಿನದ ಕಾರ್ಯಾಚರಣೆಯಲ್ಲಿ ತುರ್ತು ಸ್ಪಂದನಾ ತಂಡದ ಸ್ವಯಂ ಸೇವಕರಾದ ನೆರಿಯ ಘಟಕದ ಸ್ವಯಂ ಸೇವಕರಾದ ನಾಗೇಶ್ ಬಿ, ಸತೀಶ್ ಕೆ, ಅರಸೀನಮಕ್ಕಿ ಘಟಕದ ಅವಿನಾಶ್ ಭೀಡೆ, ಉಜಿರೆ ಘಟಕದ ಸ್ವಯಂ ಸೇವಕರಾದ ಸಚ್ಚಿನ್ ಭೀಡೆ, ಸಂದೇಶ್, ರವೀಂದ್ರ, ರಾಘವೇಂದ್ರ, ಸುಧೀರ್, ಸುಲೈಮಾನ್,ಅನಿಲ್ ಕುಮಾರ್, ಶಶಿ, ಅಶೋಕ್ ಇವರುಗಳು ತುರ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದಲ್ಲಿ ಸಂಯೋಜಕಿ ಶ್ರೀಮತಿ ರಶ್ಮಿತಾರವರ ಕರೆಯ ಮೇರೆಗೆ ಸ್ವಯಂಸೇವಕರಾದ ಶೀನಪ್ಪ ನಾಯ್ಕ್ , ಕುಶಾಲಪ್ಪ ಗೌಡ,
ಸೋಮಶೇಖರ್ ಶಿಬಾಜೆ ,ಗಂಗಾಧರ ಬದಿಗುಡ್ಡೆ, ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಮೇಶ ಬೈರಕಟ್ಟ ಸ್ಥಳಕ್ಕೆ ಧಾವಿಸಿ ವಯರ್ ಮ್ಯಾನ್ ಸಂತೋಷ್ ಹಾಗೂ ಉಮೇಶ್ ಇವರ ಉಪಸ್ಥಿತಿಯಲ್ಲಿ ತಂತಿಯ ಮೇಲಿದ್ದ ಬೃಹತ್ ಮರವನ್ನು ತೆರವುಗೊಳಿಸಿದರತೆರವು ಗೊಳಿಸಿದ ಮರದ ಒಂದು ಪಾರ್ಶ್ವ ಅಪಾಯಕಾರಿಯಾಗಿ ನಿಂತೇ ಇದ್ದು ಅದನ್ನು ತೆರವುಗೊಳಿಸುವಂತೆ ಹತ್ತಿರದ ಮನೆಯವರಾದ ನಾರಾಯಣ ನಾಯ್ಕರವರು ತಂಡದವರಲ್ಲಿ ವಿನಂತಿಸಿದಾಗ ಕುಶಾಲಪ್ಪ ಗೌಡರು ತಮ್ಮ ಮರಹತ್ತುವ ಕೌಶಲ್ಯವನ್ನು ಉಪಯೋಗಿಸಿ ಮರದ ತುದಿಗೆ ಹಗ್ಗ ಕಟ್ಟಿ ಮರವನ್ನು ಆ ಕಡೆ ವಿದ್ಯುತ್ ಲೈನ್ ಈ ಕಡೆ ಮನೆಯ ನಡುವೆ ಸುರಕ್ಷಿತವಾಗಿ ಕತ್ತರಿಸಿ ಹಾಕಲಾಯಿತು.
ವರದಿ. : ಸುಮಿತ್ರ ಸಂಯೋಜಕರು ನೆರಿಯ ಘಟಕ.

Related posts

ಬೆಳ್ತಂಗಡಿ: ರಬ್ಬರ್ ಇಂಡಿಯಾ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

Suddi Udaya

ಭವಿಷ್ಯದ ಮಾರ್ಗಸೂಚಿ ರೂಪಿಸಲು ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಸಮಿತಿ ಹಾಗೂ ಧರ್ಮಗುರುಗಳ ಸಮ್ಮೇಳನ

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ವಿ.ಹಿಂ.ಪ ಬಜರಂಗದಳ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆಯನ್ನು ಖಂಡಿಸಿ ಪೋಲಿಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ

Suddi Udaya

ಅ.22 ರಂದು ಬಳಂಜದಲ್ಲಿ ವೈಭವದ ಶಾರದಾ ಮಹೋತ್ಸವ: ಪೂರ್ವತಯಾರಿ ಬಗ್ಗೆ ಸಮಾಲೋಚನೆ ಸಭೆ

Suddi Udaya
error: Content is protected !!