37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಕೊಲ್ಪಾಡಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ

ಬೆಳಾಲು : ಜು 14 ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಬೆಳ್ತಂಗಡಿ ತಾಲೂಕು. ಬೆಳಾಲು ಕೊಲ್ಪಾಡಿ ಓಂ ಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾಶ್ರೀನಿವಾಸ್ ಗೌಡ ರವರು ನೆರವೆರಿಸಿ ಆಷಾಡ ಮಾಸದಲ್ಲಿ ಸೇವಿಸುವ ಆಹಾರಗಳ ಬಗ್ಗೆ ವೈಜ್ಞಾನಿಕವಾಗಿ ಪ್ರಾಮುಖ್ಯತೆ ಏನು ಎಂಬುವುದರ ಬಗ್ಗೆ ತಿಳಿಸಿದರು.ಸದೃಢ ಆರೋಗ್ಯ ನಿರ್ವಹಣೆಗೆ ಪೌಷ್ಠಿಕ ಆಹಾರ ತುಂಬಾ ಅವಶ್ಯಕವಾಗಿದ್ದು ಹಲವಾರು ರೋಗ ರುಜಿನ ಗಳನ್ನು ತಡೆಗಟ್ಟಲು ಸಹಕಾರಿ ರಿಯಾಗಿದೆ ಎಂದು ತಿಳಿಸಿದರು ಸಂಪನ್ಮೂಲ ವ್ಯಕ್ತಿಯಾದ ಉಷಾ ಮೇಡಂ ಸಮತೋಲನ ಆಹಾರದ ಬಗ್ಗೆ ದೀರ್ಘಕಾಲ ಕಾಡುವ ಕಾಯಿಲೆಗಳನ್ನು ತಡೆಗಟ್ಟಲು ಆಗಾದವಾದ ಪೌಷ್ಠಿಕಾಂಶಗಳನ್ನು ಒಳಗೊಂಡ ರೋಗನಿರೋದಕ ಶಕ್ತಿಯಿರುವ ಪ್ರೊಟೀನ್ ಅಂಶವುಳ್ಳ ಆಹಾರಗಳ ಸೇವನೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ನೀಲಾವತಿ ಸೇವಾಪ್ರತಿನಿಧಿ ಪ್ರಮೀಳಾರ ವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯರಾದ ಮಂಜುಳಾ ರವರು ವಹಿಸಿದರು. ಕೇಂದ್ರದ ಸದಸ್ಯರಾದ ಗುಲಾಬಿಯವರು ಸ್ವಾಗತಿಸಿ ಲಲಿತಾ ಧನ್ಯವಾದ ನೀಡಿದರು. ಸಮನ್ವಯಧಿಕಾರಿ ಮಧುರರವರು ಕಾರ್ಯಕ್ರಮ ನಿರೂಪಿಸಿದರು.

Related posts

ಮತದಾರರ ಪಟ್ಟಿಯಲ್ಲಿ ಎಡವಟ್ಟು: ಮುಂಡಾಜೆಯ ಅಶ್ವಿನಿ ಎ. ಹೆಬ್ಬಾರ್ ಬಂಟ್ವಾಳ ಆಡಳಿತ ಸೌಧದಲ್ಲಿ ಮತದಾನ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸ್ವದೇಶಿ ಜಾಗೃತಿ ಮಾಹಿತಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಹಾಗೂ ಚಾರ್ಮಾಡಿ ಹಸನಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಎ.15: ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ: ಏಕಾಹ ಭಜನಾ ಕಾರ್ಯಕ್ರಮ ಮತ್ತು 45 ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವ, ಸಾಧಕರಿಗೆ ಸನ್ಮಾನ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಾರಾವಿ ಸಿಎ ಬ್ಯಾಂಕಿಗೆ ಸತತ 5 ವರ್ಷದಿಂದ ಸಾಧನಾ ಪ್ರಶಸ್ತಿ

Suddi Udaya
error: Content is protected !!