
ಬೆಳ್ತಂಗಡಿ ಬ್ಲಾಕ್ ನಗರ ಮತ್ತು ಗ್ರಾಮೀಣ ಸಮಿತಿಯ ಸದಸ್ಯರು ಮತ್ತು ಸರ್ಕಾರದ ನಾಮನಿರ್ದೇಶಿತ ಸದಸ್ಯರು ಸಭೆಯು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಇಂದು ನಡೆಯಿತು.
ಸಭೆಯ ಪ್ರಾರಂಭದ ಮೊದಲು ಇತ್ತೀಚೆಗೆ ನಮ್ಮನ್ನು ಆಗಲಿದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನಮನ ಸಲ್ಲಿಸಲಾಯಿತು.ಆಗಲಿದ ನಾಯಕರ ಬಗ್ಗೆ ಧರಣೇಂದ್ರ ಕುಮಾರ್ ,ಸೆಬಾಸ್ಟಿಯನ್ ,ಲಕ್ಷಣ ಗೌಡ,ರಾಜಶೇಖರ್ ಶೆಟ್ಟಿ ಸಂತಾಪ ನುಡಿಗಳನ್ನಾಡಿದರು.
ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಸರ್ಕಾರದ ಜನಪರ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಪಕ್ಷದ ಮುಖಂಡರು ಶ್ರಮವಹಿಸಬೇಕು ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸಲು ತಯಾರಿ ಮಾಡಬೇಕೆಂದರು.
ಈ ಸಭೆಯಲ್ಲಿ ಉಭಯ ಬ್ಲಾಕ್ ಗಳ ಅಧ್ಯಕ್ಷರಾದ ಸತೀಶ್ ಕೆ ಬಂಗೇರ ಕಾಶಿಪಟ್ಣ, ಕೆ.ಎಮ್ ನಾಗೇಶ್ ಕುಮಾರ್ ಗೌಡ ,ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಸುರೇಶ್ ನಾವೂರು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಧರಣೇಂದ್ರ ಕುಮಾರ್ ,ಶೇಖರ್ ಕುಕ್ಕೆಡಿ,ನಮಿತಾ ಕೆ ಪೂಜಾರಿ ,ಪಕ್ಷದ ಪ್ರಮುಖರಾದ ಉಮರ್ ಕೆ ಮುಸ್ಲಿಯಾರ್ ,ಶ್ರೀಮತಿ ಲೋಕೇಶ್ವರಿ ವಿನಯ್ ಚಂದ್ರ ಗೌಡ ,ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ ಕುಮಾರ್ ,ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಸುಭಾಷ್ ಚಂದ್ರ ರೈ,ದಿನೇಶ್ ಕೋಟ್ಯಾನ್ ಬೆಳಾಲು,,ಪಿ.ಟಿ ಸೆಬಾಸ್ಟಿಯನ್ , ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ವಂದನ ಭಂಡಾರಿ ,ಹಾಗೂ ಸರ್ಕಾರದಿಂದ ನೇಮಕಗೊಂಡ ನಾಮನಿರ್ದೇಶಿತ ಸದಸ್ಯರು ಪಕ್ಷದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.