April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

ಕುತ್ಲೂರು: ಗ್ರಾಮೀಣ ಭಾಗದ ಅಂಗನವಾಡಿ ಮಕ್ಕಳಿಗೆ ನಗರ ಪ್ರದೇಶಗಳ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ನೀಡುವ ವಿದ್ಯಾಭ್ಯಾಸದ ರೀತಿಯಲ್ಲಿ ಮಾಹಿತಿಗಳನ್ನು ನೀಡುವ ದೃಷ್ಟಿಯಿಂದ ಊರಿನ ದಾನಿಗಳಾದ ಶ್ರೀಮತಿ ರಶ್ಮಿ ಹೆಗ್ಡೆ ಮತ್ತು ಪ್ರಶಾಂತ್ ಹೆಗ್ಡೆ ದಂಪತಿಗಳು ಟಿವಿ ಮತ್ತು ಇಂಟರ್ನೆಟನ್ನು ಕೊಡುಗೆಯಾಗಿ ನೀಡಿದರು.

ಇದರ ಸದುಪಯೋಗವನ್ನು ಹಳ್ಳಿ ಪ್ರದೇಶವಾಗಿರುವ ಕೂತ್ಲೂರು ಅಂಗನವಾಡಿಯ ಮಕ್ಕಳು ಪಡೆಯಲಿದ್ದಾರೆ. ಇಂಟರ್ನೆಟ್‌ಗೆ ಬೇಕಾಗಿರುವ ಒಂದು ವರ್ಷದ ರೀಚಾರ್ಜ್ ಮೊತ್ತವನ್ನು ಕುತ್ಲೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮಾಡಿದರು. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ನೀಡುವ ಮಾಹಿತಿಯಿಂದ ಸಣ್ಣ ಮಕ್ಕಳಲ್ಲಿ ಕಲಿಯುವಿಕೆಯ ಆಸಕ್ತಿ ಹೆಚ್ಚಿಸಲಿದ್ದು, ಹೆತ್ತವರಲ್ಲಿ ಇವರ ಈ ಕೊಡುಗೆಯು ಸಂತೋಷವನ್ನು ತಂದಿದೆ ಮತ್ತು ಗ್ರಾಮಸ್ಥರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Related posts

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಕರಿಮಣೇಲು ನಿವಾಸಿ ಶ್ರೀಮತಿ ಶಾಂತ ನಿಧನ

Suddi Udaya

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಬೆಳ್ತಂಗಡಿ ಬಿಜೆಪಿ ಮಂಡಲದಿಂದ ರಸ್ತೆ ತಡೆ

Suddi Udaya

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಪ್ರಕೃತಿ ವಿಕೋಪಕ್ಕೆ ಹಾನಿಯಾಗಿರುವ ಮನೆಗಳಿಗೆ ಭೇಟಿ

Suddi Udaya
error: Content is protected !!