September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪ್ರತಿಷ್ಟಿತ ಎಳ್ಕಜೆ ಗುತ್ತಿನಲ್ಲಿ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಎಲ್ಕಜೇ ಗುತ್ತಿನ ಆಡಳಿತ ಮೊಕ್ತೇಸರ ದಿನೇಶ್ ಅಮೀನ್ ಕುಂದಾಪುರ ರವರ ನೇತೃತ್ವದಲ್ಲಿ ಎಲ್ಕಜೆ ಗುತ್ತಿನಲ್ಲಿ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಯಜಮಾಡಿಯ ಮಹೇಶ ಶಾಂತಿ ಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಅವರು ಮಾತನಾಡುತ್ತಾ ಪವಿತ್ರ ಪುಣ್ಯಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾರ್ಚ್1 ರಿಂದ ಮಾರ್ಚ್ 5 ರ ತನಕ ಜರಗುವ ಜಾತ್ರೋತ್ಸವದೊಂದಿಗೆ ಮಾರ್ಚ್ 2 ರಂದು ಆದಿತ್ಯವಾರ ಮಹಿಳೆಯರಿಗಾಗಿ ಮಡಿಲು ಸೇವೆಯ ವಿಶಿಷ್ಟ ಕಾರ್ಯಕ್ರಮ ಜರಗಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು. ಬೆಳ್ತಂಗಡಿ ತಾಲೂಕಿನ ಮುಖ್ಯ ಸಂಚಾಲಕ ನಿತ್ಯಾನಂದ ನಾವರ ಸ್ವಾಗತಿಸಿ ಪ್ರಸ್ತಾವಿಸಿದರು.


ರಕ್ಷಿತ್ ಶಿವರಾಮ್, ಜಯರಾಮ ಬಂಗೇರ, ದಿನೇಶ್ ಬೆಳಿಬೈಲು, ಮೋಹನ್ ಪೂಜಾರಿ , ಬಾಲಕೃಷ್ಣ ಪೂಜಾರಿ, ಸುನಿಲ್ ಪೂಜಾರಿ,ಡಾ. ಸುಧಾಮ್ಸ್, ಶ್ರೀಮತಿ ಲೋಲಾಕ್ಷಿ ಶೇಖರ ಬಂಗೇರ, ಶ್ರೀಮತಿ ಸಂಗೀತ ಪಿ ಹೇರಾಜೆ, ಶ್ರೀಮತಿ ರಜನಿ ಪೂಜಾರಿ, ಹರೀಶ್ ಪೂಜಾರಿ ಸೂಲಬೆಟ್ಟು, ಹಾಗೂ ನೂರಾರು ಭಕ್ತರು ಜೊತೆಗಿದ್ದರು.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದ ಗುತ್ತಿಗಾರು ಫಾ. ಆದರ್ಶ್ ಜೋಸೆಫ್ ರವರಿಗೆ ಹ್ಯೂಮನಿಟೆರಿಯನ್ ಎಕ್ಸಲೆನ್ಸ್ ಅವಾರ್ಡ್

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮುರಳಿ ಬಲಿಪ, ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

Suddi Udaya

ಉಜಿರೆ: ಅನುಗ್ರಹದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬುರುಡೆ ಪ್ರಕರಣ: ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ ಮಂಡನೆ: ಸುಧೀರ್ಘ ವಾದ ಮಂಡಿಸಿದ ಎಸ್.ಐ.ಟಿ.ಪರ ವಕೀಲ ಎಪಿಪಿ ದಿವ್ಯರಾಜ್ ಹೆಗ್ಡೆ

Suddi Udaya

ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ: ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕೊಯ್ಯೂರು: ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya
error: Content is protected !!