24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಎಕ್ಸೆಲ್ ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ (ಎಸ್. ಟಿ. ಪಿ) ವಿಸ್ತರಿತ ಘಟಕದ ಭೂಮಿಪೂಜೆ

ಬೆಳ್ತಂಗಡಿ:ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಮತ್ತು ಹಾಸ್ಟೆಲ್ ಗಳ ತ್ಯಾಜ್ಯ ನೀರು ಹಾಗೂ ಪರಿಸರದ ಕೊಳಚೆ ನೀರಿನ ಸಂಸ್ಕರಣೆಯ ನೂತನ ವಿಸ್ತರಿತ ಘಟಕಕ್ಕೆ ಇತ್ತೀಚಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.

ಪ್ರತಿದಿನ ಹತ್ತುಲಕ್ಷ ಲೀಟರ್ ನೀರಿನ ಶುದ್ಧೀಕರಣ ಸಾಮರ್ಥ್ಯವುಳ್ಳ, ಸುಮಾರು ಮೂರು ಕೋಟಿ ರೂಪಾಯಿಗಳ ವೆಚ್ಚ ತಗಲುವ , ತಾಲೂಕಿನ ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇದಾಗಿದೆ. ಘಟಕದಲ್ಲಿ ಸಂಸ್ಕರಿಸಿದ ನೀರನ್ನು ಸ್ಥಳೀಯ ಕೃಷಿ ಭೂಮಿಗೆ ಬಳಸುವ ಮೂಲಕ, ಕೃಷಿಗೆ ಬೆಂಬಲ ನೀಡುವ ಯೋಚನೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯದ್ದಾಗಿದೆ.

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಹೆತ್ತವರಾದ ಸತೀಶ್ ಕುಮಾರ್ ಆರಿಗ ಬೊಳ್ಳೂರು ಗುತ್ತು ಹಾಗೂ ಶುಭಲತಾ ಅವರು ನೂತನ ಘಟಕದ ಶಂಕು ಸ್ಥಾಪನೆ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿಯವರು, ಪ್ರಾಂಶುಪಾಲರು, ಆಡಳಿತಾಧಿಕಾರಿ, ಕ್ಯಾಂಪಸ್ ಮ್ಯಾನೇಜರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳ ಅಳವಡಿಕೆಯಿಂದ ಪ್ರಯೋಜನ: ಪತ್ರಿಕಾಗೋಷ್ಠಿಯಲ್ಲಿ ಪುರಂದರ ದಾಸ್ ಹೇಳಿಕೆ

Suddi Udaya

ಮುಂಡಾಜೆ: ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನವರಾತ್ರಿ ಪೂಜೆ ಭಜನಾ ಕಾರ್ಯಕ್ರಮ

Suddi Udaya

ಇಂದಿನಿಂದ (ಫೆ.27 ) ವಿದ್ಯಾಮಾತಾ ಅಕಾಡೆಮಿಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಪರೀಕ್ಷಾ ತರಬೇತಿ ಪ್ರಾರಂಭ

Suddi Udaya

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಬೆಹರಿನ್ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್ ಪ್ರದಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2023ನೇ ವರ್ಷದ ಚಟುವಟಿಕೆಗಳು ಸಂಪನ್ನ

Suddi Udaya
error: Content is protected !!