ಬೆಳ್ತಂಗಡಿ: ಮಾಜಿ ಶಾಸಕರಾದ ಕೀರ್ತಿಶೇಷ ಕೆ. ವಸಂತ ಬಂಗೇರರು ಯಾವುದೇ ಕಡತ ಹಿಡಿದುಕೊಂಡು ತಮ್ಮ ಬಳಿ ಬಂದರೂ ಮರು ಮಾತನಾಡದೆ ಸಹಿ ಹಾಕುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮಾಜಿ ಶಾಸಕರು ಅನಾರೋಗ್ಯಕ್ಕಿಡಾಗುವ ಸ್ವಲ್ಪ ದಿನದ ಮುಂಚೆ ಬೆಂಗಳೂರಿಗೆ ಭೇಟಿ ನೀಡಿ ಶಿಫಾರಸ್ಸು ಮಾಡಿದ ತನ್ನ ಕ್ಷೇತ್ರದ ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ಷೇತ್ರಕ್ಕೆ ಸಂಬಂದಿಸಿದ ಕಡತವನ್ನು ಮಂಜೂರುಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಕಳೆದ ಜನವರಿ 04 ರಂದು ಮಾಜಿ ಶಾಸಕರಾದ ಕೆ. ವಸಂತ ಬಂಗೇರರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಬೆಂಗಳೂರಿಗೆ ತೆರಳಿದ ನಿಯೋಗದಲ್ಲಿದ್ದ ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್, ಪೊಕ್ಕಿ ಮತ್ತು ಕಾರ್ಯದರ್ಶಿ ಸತೀಶ್ ಪೂಜಾರಿ, ಉಜಿರ್ದಡ್ಡ ರವರುಗಳು ತಮ್ಮ ಸಂಘದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಉತ್ತೇಜಸಲು ವೇಣೂರು ಗ್ರಾಮದಲ್ಲಿ 0.14 ಸೆಂಟ್ಸ್ ಜಮೀನು ಕಾದಿರುರಿಸುವರೇ ವಿಧಾನ ಸೌಧದ ಬಹು ಮಹಡಿ ಕಟ್ಟಡ (ಎಂ ಎಸ್ ಬಿಲ್ಡಿಂಗ್ ) ದಲ್ಲಿರುವ ಕಂದಾಯ ಇಲಾಖೆಯ ಪೀಠಾಧಿಪತಿಗಳ ಬಳಿ ಇದ್ದ ಕಡತವನ್ನು ಸಚಿವ ಸಂಪುಟದ ಸಭೆಗೆ ಮಂಡಿಸುವರೇ ತಾವು ಸೂಚಿಸಬೇಕು ಎಂದು ಕೋರಿದಾಗ ಅವರಿಬ್ಬರನ್ನು ತಾನು ವಾಸ್ತವ್ಯ ಮಾಡಿಕೊಂಡಿದ್ದ ಕುಮಾರ ಕೃಪಾ ಗೆಸ್ಟ್ ಹೌಸ್ ಗೆ ಕರೆದುಕೊಂಡು ಹೋಗಿ ತಾವೇ ಸ್ವತಃ ಹಣ ಪಾವತಿಸಿ ಪ್ರತ್ಯೇಕ ಕೊಠಡಿ ಮಾಡಿಕೊಟ್ಟು ಮರುದಿನ ಬೆಳಗ್ಗೆ ಅವರೊಂದಿಗೆ ಬಹು ಮಹಡಿ ಕಟ್ಟಡಕ್ಕೆ ಬಂದ ಬಂಗೇರರು ಖುದ್ದು ಪೀಠಾಧಿಪತಿಗಳ ಕಚೇರಿಗೆ ಬಂದು ಕಡತವನ್ನು ಕಂದಾಯ ಸಚಿವರಾದ ಬೈರೇ ಗೌಡರ ಬಳಿ ಕಳುಹಿಸುವಂತೆ ಸೂಚಿಸಿ ನಂತರ ಕೃಷ್ಣ ಬೈರೇ ಗೌಡರನ್ನು ಭೇಟಿ ಮಾಡಿ ಕಡತವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಮನವಿ ಮಾಡಿದ್ದರು.
ಇದೀಗ ಅವರು ಕೊನೆಯದಾಗಿ ವಿಧಾನ ಸೌಧಕ್ಕೆ ಭೇಟಿ ನೀಡಿ ತನ್ನ ಕ್ಷೇತ್ರದ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಜಮೀನು ಮಂಜೂರಾತಿಗಾಗಿ ಶ್ರಮಿಸಿದ ಕಡತವನ್ನು ಮುಖ್ಯಮಂತ್ರಿಗಳು ಮಂಜೂರುಗೋಳಿಸಿರುವುದು ಬಂಗೇರರ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ.