24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಪಾಯದಂಚಿನಲ್ಲಿರುವ ತೋಟತ್ತಾಡಿಯ ಸೇತುವೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

ಚಾರ್ಮಾಡಿ ಗ್ರಾಮದ ತೋಟತ್ತಾಡಿಯ ಮುಖ್ಯ ರಸ್ತೆಯ ಸೇತುವೆಯ ಅಪಾಯದ ಹಂಚಿನಲ್ಲಿದ್ದು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ 70 ವರ್ಷಗಳಲ್ಲಿ ಇರುವಂತಹ ಸೇತುವೆಯು ಮಳೆಗೆ ಹಾನಿಯಾಗಿದ್ದು ಪಂಚಾಯತಿ ಸದಸ್ಯರು ಹಾಗೂ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರು ದುರಸ್ತಿಪಡಿಸುವ ಯಾವುದೇ ಕೆಲಸಗಳನ್ನು ಮಾಡದೆ ಕೇವಲ ಪೊಳ್ಳು ಭರವಸೆಯನ್ನು ನೀಡಿದ್ದಾರೆ.

ಇದೀಗ ಈ ಸೇತುವೆ ಅಪಾಯದಲ್ಲಿದ್ದು ಶಾಲೆ, ಕಾಲೇಜು ಹಾಗೂ ದೈನಂದಿನ ಕೆಲಸಕ್ಕೆ ಹೋಗುವಂತಹ ಜನರು ಈ ಸೇತುವೆ ಮೇಲೆ ಹೋಗುವಾಗ ಜೀವ ಭಯದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ಅನಾಹುತ ಆಗುವ ಮೊದಲೇ ಇದಕ್ಕೆ ಸಂಬಂಧಪಟ್ಟ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಹಾಗೂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

ಮೇ. 13 ವಿಧಾನಸಭಾ ಚುನಾವಣಾ ಮತ ಎಣಿಕೆ: ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ

Suddi Udaya

ಪುದುವೆಟ್ಟು ಶ್ರೀಧ.ಮಂ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ (ಅಕ್ರಮ ಸಕ್ರಮ) ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರ ನೇಮಕ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ದಸರಾ ಸಂಭ್ರಮಾಚರಣೆ

Suddi Udaya

ಡಿ.10: ಕರಾಯದಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!