April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ.

ಮುಂಡಾಜೆ ಗ್ರಾಮದ ಅಗರಿ ಎಂಬ ಪರಿಸರದಲ್ಲಿ ಸುಮಾರು 50 ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಬಹಳಷ್ಟು ಕ್ಷೀಣಿಸಿದ್ದು , ವರ್ಷದಲ್ಲಿ ಏಳೆಂಟು ಬಾರಿ ಈ ವಿದ್ಯುತ್ ತಂತಿ ಮಾರ್ಗಕ್ಕೆ ಕಡಿದು ಬೀಳುತ್ತಿದೆ. ಈ ಭಾಗದ ಲೈನ್ ಮ್ಯಾನ್ ದೂರು ನೀಡಿದ ತಕ್ಷಣ ಬಂದು ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಅದೆಷ್ಟು ಬಾರಿ ಇಲಾಖೆಗೆ ಮನವಿ ಮಾಡಿದರೂ ಕೂಡಾ ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸುತ್ತಿಲ್ಲ. ಈ ಹಿಂದೆ ಮೆಸ್ಕಾಂ ಇಲಾಖೆಯ ಅದಾಲತ್ ನಲ್ಲಿ ಕೂಡ ದೂರು ದಾಖಲಿಸಲ್ಪಟ್ಟಿದೆ. ಇದೀಗ ಮತ್ತೊಮ್ಮೆ ಇದೇ ಪರಿಸರದಲ್ಲಿ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗುವ ದಾರಿಯಲ್ಲೇ ವಿದ್ಯುತ್ ತಂತಿಯೊಂದು ಕಡಿದು ಬಿದ್ದು ಕುತ್ತಿಗೆ ನೇರಕ್ಕೆ ನೇತಾಡುತ್ತಿದ್ದು, ಪ್ರಾಣಕ್ಕೆ ಕಂಟಕವಾಗಿದೆ.

ಅದೃಷ್ಟವಶಾತ್ ಜು.18 ರಂದು ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ಆಗುವ ದೊಡ್ಡ ಅನಾಹುತ ತಪ್ಪಿದೆ. ಇದೇ ಮನೆಯಲ್ಲಿ ಈ ಹಿಂದೆ 3-4 ವರ್ಷಗಳಿಂದ ಕಾಲೇಜಿನ ಹಾಗೂ ಪ್ರೌಢಶಾಲೆಯ ಕ್ರೀಡಾಪಟು ವಿದ್ಯಾರ್ಥಿಗಳು ನೆಲೆಸಿದ್ದರು. ಇಂತಹ ಸಮಸ್ಯೆ ಇರುವುದರಿಂದಲೇ ಈ ವರ್ಷ ಇಲ್ಲಿ ಮಾಲೀಕರು ವಾಸಕ್ಕೆ ಅವಕಾಶ ನೀಡಲಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪ್ರಾಣ ಹಾನಿ ಆಗುವ ಮೊದಲು ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.

Related posts

ಬೆಳ್ತಂಗಡಿ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಕುಂಟಿನಿ ಬೂತ್ ಸಮಿತಿ ಎಸ್.ಡಿ.ಪಿ.ಐ ವತಿಯಿಂದ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಡಿ. 17: ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಸಭಾಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಯವರ ಪುಣ್ಯಸ್ಮರಣೆ

Suddi Udaya

ಮೌಲ್ಯ ಶಿಕ್ಷಣ” ಪುಸ್ತಕ ರಚನೆ ಸಮಿತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಐ. ಶಶಿಕಾಂತ್ ಜೈನ್ ಆಯ್ಕೆ

Suddi Udaya

ಲಾಯಿಲ ಮತ್ತು ನಗರ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ

Suddi Udaya
error: Content is protected !!