ಸರಕಾರಿ ಪ್ರೌಢಶಾಲೆ ನಡ: “ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲೆ – 2024” ಪ್ರಶಸ್ತಿಗೆ ಆಯ್ಕೆ.

Suddi Udaya

ನಡ :ಸರಕಾರಿ ಪ್ರೌಢಶಾಲೆ ನಡ: “ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲೆ – 2024” ಪ್ರಶಸ್ತಿಗೆ ಆಯ್ಕೆಗೊಂಡಿದೆ. “ಗಣಿತ ಪ್ರಯೋಗಶಾಲೆ” “ಹಿಂದಿ ಸ್ಮಾರ್ಟ್ ಕ್ಲಾಸ್” “ವನಸಿರಿ ಔಷಧೀಯ ಸಸ್ಯ ವನ” “ATL ಟಿಂಕರಿಂಗ್ ವಿಜ್ಞಾನ ಲ್ಯಾಬ್” ಸಂಪೂರ್ಣ ಶಾಲೆಗೆ ಸೋಲಾರ್ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ , “ಸಮಾಜ ವಿಜ್ಞಾನ ಕ್ರಿಯೇಟಿವ್ ಕ್ಲಾಸ್” ಶಾಲೆಯ‌ ಸುತ್ತ-ಮುತ್ತ ಹಚ್ಚ ಹಸುರಾದ ಲಾನ್ ಅಳವಡಿಕೆ, Pot ನಲ್ಲಿ ಮತ್ತು ತೂಗು ಬುಟ್ಟಿಗಳಲ್ಲಿ ಬೆಳೆಸಲಾಗಿರುವ ನೂರಾರು ಬಗೆಯ ಅಲಂಕಾರಿಕ ಗಿಡಗಳು, ಎರಡು ಎಕರೆಯಲ್ಲಿ ಬೆಳೆಸಲಾಗುತ್ತಿರುವ ಅಡಿಕೆ ತೋಟ, ಅಕ್ಷರ ಕೈತೋಟ, ತರಕಾರಿ ತೋಟ , ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಆಕರ್ಷಣೆಯಾಗಿದೆ. ಮುಖ್ಯ ಶಿಕ್ಷಕರ ಮತ್ತು ಎಲ್ಲಾ ಶಿಕ್ಷಕರ ಶ್ರಮದ ಪ್ರತಿಫಲ 2024ನೇ ಸಾಲಿನ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ವತಿಯಿಂದ ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲೆ – 2024 ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಇದೇ ತಿಂಗಳ 27 ನೇ ತಾರೀಖು ರೂ 10,000 ನಗದು ಬಹುಮಾನ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲಿದೆ.

Leave a Comment

error: Content is protected !!