23.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಬೆಳ್ತಂಗಡಿ : ಕಾಮಗಾರಿ ಕೆಲಸಕ್ಕೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ಕಾಮಗಾರಿ ಕೆಲಸಕ್ಕೆ ಬೇರೆ ರಾಜ್ಯದಿಂದ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣವನ್ನು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಲಾಗಿದೆ.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಬಳಿಯ ಕಟ್ಟಡ ಕೆಲಸಕ್ಕೆ ಕಲ್ಕತ್ತಾ ಮೂಲದ ದಂಪತಿಗಳಾದ ಮುಷರಫ್ ಮತ್ತು ರೀಮಾ(24) ಬಂದಿದ್ದು. ಪತ್ನಿ ರೀಮಾ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಜು.8 ರಂದು ಹೋಗಿದ್ದು ಬಳಿಕ ವಾಪಸ್ ಬರದೆ ಇದ್ದ ಬಗ್ಗೆ ಪತಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜು.8 ರಂದು ನಾಪತ್ತೆ ದೂರು ನೀಡಿದ್ದರು‌.

ಬೆಳ್ತಂಗಡಿ ಪೊಲೀಸ್ ನಾಪತ್ತೆ ಪ್ರಕರಣ ಜಾಡು ಹಿಡಿದು ಟೆಕ್ನಿಕಲ್ ಮಾಹಿತಿ ಆಧಾರದಲ್ಲಿ ಜು.17 ರಂದು ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಪತಿ ಜೊತೆ ಕಳುಹಿಸಿಕೊಟ್ಟು ಪ್ರಕರಣ ಸುಖಾಂತ್ಯ ಮಾಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್ ಮತ್ತು ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ,ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದ ಸಿಬ್ಬಂದಿ ಚರಣ್ ರಾಜ್ , ಬಸವರಾಜ್ , ಬೆನ್ನಿಚ್ಚನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಅರಸಿನಮಕ್ಕಿ -ಶಿಶಿಲ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಕೊಕ್ಕಡ ಸರಕಾರಿ ಆಸ್ಪತ್ರೆಯ ಬಾವಿಯ ಸ್ವಚ್ಛತಾ ಕಾರ್ಯ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಟೋಟ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ರವಿ.ಡಿ.ಚೆನ್ನಣ್ಣವರ್ ಭೇಟಿ: ಸ್ಥಳ ಪರಿಶೀಲನೆ

Suddi Udaya

ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಗಾಗಿ ಲ| ಬಿ.ಕೆ ವಿಶ್ವನಾಥ ಆರ್. ನಾಯಕ್‌ರಿಗೆ ಡಾಕ್ಟರೇಟ್ ಪದವಿ

Suddi Udaya

ಬೆಳ್ತಂಗಡಿಯ ಜಗದೀಶ್ ಕುಲಾಲ್ ರವರಿಗೆ ಕುಂಬಾರರ ಸೇವಾ ಸಂಘದಿಂದ ಕ್ರೀಡಾ ರತ್ನ ಪ್ರಶಸ್ತಿ

Suddi Udaya

ಪಡ್ಡಂದಡ್ಕ ಮದರಸದಲ್ಲಿ ಗಣರಾಜ್ಯೋತ್ಸವ

Suddi Udaya

ಅ.13-19 : ವಾಣಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya
error: Content is protected !!