September 24, 2026
ಗ್ರಾಮಾಂತರ ಸುದ್ದಿಶಾಲಾ ಕಾಲೇಜು

ಸರಕಾರಿ ಪ್ರೌಢಶಾಲೆ ನಡ: “ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲೆ – 2024” ಪ್ರಶಸ್ತಿಗೆ ಆಯ್ಕೆ.

ನಡ :ಸರಕಾರಿ ಪ್ರೌಢಶಾಲೆ ನಡ: “ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲೆ – 2024” ಪ್ರಶಸ್ತಿಗೆ ಆಯ್ಕೆಗೊಂಡಿದೆ. “ಗಣಿತ ಪ್ರಯೋಗಶಾಲೆ” “ಹಿಂದಿ ಸ್ಮಾರ್ಟ್ ಕ್ಲಾಸ್” “ವನಸಿರಿ ಔಷಧೀಯ ಸಸ್ಯ ವನ” “ATL ಟಿಂಕರಿಂಗ್ ವಿಜ್ಞಾನ ಲ್ಯಾಬ್” ಸಂಪೂರ್ಣ ಶಾಲೆಗೆ ಸೋಲಾರ್ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ , “ಸಮಾಜ ವಿಜ್ಞಾನ ಕ್ರಿಯೇಟಿವ್ ಕ್ಲಾಸ್” ಶಾಲೆಯ‌ ಸುತ್ತ-ಮುತ್ತ ಹಚ್ಚ ಹಸುರಾದ ಲಾನ್ ಅಳವಡಿಕೆ, Pot ನಲ್ಲಿ ಮತ್ತು ತೂಗು ಬುಟ್ಟಿಗಳಲ್ಲಿ ಬೆಳೆಸಲಾಗಿರುವ ನೂರಾರು ಬಗೆಯ ಅಲಂಕಾರಿಕ ಗಿಡಗಳು, ಎರಡು ಎಕರೆಯಲ್ಲಿ ಬೆಳೆಸಲಾಗುತ್ತಿರುವ ಅಡಿಕೆ ತೋಟ, ಅಕ್ಷರ ಕೈತೋಟ, ತರಕಾರಿ ತೋಟ , ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಆಕರ್ಷಣೆಯಾಗಿದೆ. ಮುಖ್ಯ ಶಿಕ್ಷಕರ ಮತ್ತು ಎಲ್ಲಾ ಶಿಕ್ಷಕರ ಶ್ರಮದ ಪ್ರತಿಫಲ 2024ನೇ ಸಾಲಿನ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ವತಿಯಿಂದ ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲೆ – 2024 ಪ್ರಶಸ್ತಿಗೆ ಆಯ್ಕೆಗೊಂಡಿದ್ದು ಇದೇ ತಿಂಗಳ 27 ನೇ ತಾರೀಖು ರೂ 10,000 ನಗದು ಬಹುಮಾನ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲಿದೆ.

Related posts

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮ

Suddi Udaya

ಫೆಂಗಲ್ ಚಂಡಮಾರುತ: ಡಿ.02 ರಿಂದ 03 ರವರೆಗೆ ದ.ಕ. ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ

Suddi Udaya

ನಾರಾವಿ ವಾಲ್ಮೀಕಿ ಆಶ್ರಮ ಶಾಲಾ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Suddi Udaya

ವಿದ್ವತ್ ಪಿ.ಯು. ಕಾಲೇಜಿನಲ್ಲಿ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮದಿನಾಚರಣೆ

Suddi Udaya

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಭೇಟಿ, ಸಮಾಲೋಚನೆ

Suddi Udaya
error: Content is protected !!