27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

ವೇಣೂರು: ವೇಣೂರು ಗ್ರಾಮ ಪಂಚಾಯತಿನ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಸೆ.24ರಂದು ಪಂಚಾಯತ್ ಕಟ್ಟಡದ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಇದರ ಕಲ್ಯಾಣಾಧಿಕಾರಿ ಜೋಸೆಫ್ ಪಿ.ಎಸ್. ಅವರು ಭಾಗವಹಿಸಿ ಸಭೆಯನ್ನು ಮುನ್ನಡೆಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಎನ್, ಸದಸ್ಯರಾದ ಶುಭ, ಸುಚಿತ್ರ, ನೇಮಯ್ಯ ಕುಲಾಲ್, ಸಂಭಾಷಿನಿ, ವಸಂತಿ, ಅರುಣ್ ಕ್ರಾಸ್ಟ, ಲೀಲಾವತಿ, ಲೋಕಯ್ಯ ಪೂಜಾರಿ, ಸುಜಾತಾ, ಸುನಿಲ್ ಕುಮಾರ್ ಪಿ, ಅರುಣ್ ಹೆಗ್ಡೆ, ಮಾಲತಿ, ಸುಮಾ, ಪುಷ್ಪ ಡಿ, ಶೈಲಜಾ, ಜಿನ್ನು, ಸುಂದರ ಹೆಗ್ಡೆ, ಅನೂಪ್ ಜೆ ಪಾಯಸ್, ವೀಣಾ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿಗಳಾದ ರಾಜು ವರದಿ ವಾಚಿಸಿದರು. ನಾರಾಣಪ್ಪ ವಂದಿಸಿದರು. ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

Related posts

ಟೇಬಲ್ ಟೆನ್ನಿಸ್ ಪಂದ್ಯಾಟ: ಉಜಿರೆ ಎಸ್ ಡಿ ಎಂ ನ್ಯಾಚುರೋಪಥಿ ಚಾಂಪಿಯನ್

Suddi Udaya

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್‌ ಗುರುವಾಯನಕೆರೆ ಮಸೀದಿಗೆ ಭೇಟಿ

Suddi Udaya

ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿ ಯವರನ್ನು ಭೇಟಿಯಾದ ಎಸ್.ಡಿ.ಪಿ.ಐ ನಾಯಕರು

Suddi Udaya

ಕೊಕ್ಕಡ ಅರೆಕಾ ಪ್ಲೇಟ್ ಇಂಡಸ್ಟ್ರಿಸ್ ಮಾಲಕ ಶ್ರೀಕಾಂತ್ ರಿಂದ ಉಪ್ಪಾರಪಳಿಕೆ ಯಿಂದ ಗೋಳಿತೊಟ್ಟು ರಸ್ತೆಯಲ್ಲಿ ಇದ್ದ ಗಿಡಗಂಟಿ ಹಾಗೂ ಪೊದೆಗಳ ದುರಸ್ತಿ ಕಾರ್ಯ

Suddi Udaya

ಮುಂಡಾಜೆ ಪ್ರೌಢಶಾಲೆ ಮುಂಡಾಜೆ ಶಾಲೆಗೆ ಶೇ. 95.28

Suddi Udaya

ಕಳಿಯ ಗ್ರಾ.ಪಂ. ನ ವಾರ್ಡ್ ಸಭೆ

Suddi Udaya
error: Content is protected !!