27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಾಣಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ. ವಹಿಸಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶಂಕರ್ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, “NSS – From Service to Leadership, From Leadership to Change” ಎಂಬ ಆಶಯದೊಂದಿಗೆ ಪ್ರೇರಣಾದಾಯಕವಾಗಿ ಮಾತನಾಡಿದರು.

NSSನ ಇತಿಹಾಸ, “Not Me But You” ಎಂಬ ಧ್ಯೇಯವಾಕ್ಯದ ಮಹತ್ವ, ಸಮಾಜ ಸೇವೆಯ ಅಗತ್ಯತೆ, ಯುವಶಕ್ತಿಯ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳು ಕೇವಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಾಗದೆ ಸಮಾಜದಲ್ಲಿ ಬದಲಾವಣೆ ತರುವ Change Makers ಆಗಬೇಕು ಎಂಬ ಸಂದೇಶವನ್ನು ಅವರು ನೀಡಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ದಿನೇಶ್ ಗೌಡ ಯು., ಸಹ ಕಾರ್ಯಕ್ರಮ ಅಧಿಕಾರಿ ಶ್ರಾವ್ಯ ಎಸ್. ಉಪಸ್ಥಿತರಿದ್ದರು.

ಎನ್.ಎಸ್.ಎಸ್ ಘಟಕ ನಾಯಕ ಕೈಲಾಶ್ ಸ್ವಾಗತಿಸಿದರು. ಘಟಕ ನಾಯಕಿ ಇಂದುಮತಿ ವಂದಿಸಿದರು. ಸ್ವಯಂಸೇವಕಿ ಆಶೀತಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಮೇ.3 : ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಏರುತ್ತಿರುವ ತಾಪಮಾನ: ಅಂಗನವಾಡಿ ಕೇಂದ್ರಗಳ ಸಮಯ ಪರಿಷ್ಕರಣೆ- ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಕಾರ್ಯ ನಿರ್ವಹಣೆಗೆ ಆದೇಶ

Suddi Udaya

ಬೆಳ್ತಂಗಡಿ ಯುವಮೋರ್ಚಾ ಮಂಡಲ ವತಿಯಿಂದ ಸಂಘಟನಾತ್ಮಕ ಸಭೆ

Suddi Udaya

ಪುದುವೆಟ್ಟು ನಿಡ್ವಾಳ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಸಂಪರ್ಕ ರಸ್ತೆಗೆ ಅನುದಾನ ನೀಡಿ ಅಭಿವೃದ್ದಿ ಪಡಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸೂರಜ್ ಬಳಂಜ ಹೆಚ್. ಪೂಜಾರಿ ಆಯ್ಕೆ

Suddi Udaya
error: Content is protected !!