24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಗ್ರಾ.ಪಂ. ಯಿಂದ ಡೆಂಗ್ಯೂ ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ಅಭಿಯಾನ

ಧರ್ಮಸ್ಥಳ ಗ್ರಾ.ಪಂ. ಯಿಂದ ಡೆಂಗ್ಯೂ ಸಾಂಕ್ರಾಮಿಕ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿಯವರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬರುತ್ತಿರುವುದರಿಂದ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿ ತಾಣಗಳ ಸಂಖ್ಯೆಯು ಹೆಚ್ಚಾಗಿದ್ದು. ಈಡಿಸ್ ಸೊಳ್ಳೆ ಉತ್ಪತ್ತಿಯಲ್ಲಿ ಗಣನೀಯವಾಗಿ ಏರಿಕೆಯಾಗಿರುವ ಕಾರಣ ಡೆಂಗ್ಯೂ ಜ್ವರ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ, ಡೆಂಗ್ಯೂ ನಿಯಂತ್ರಣ ಮಾಡುವ ಬಗ್ಗೆ ಲಾರ್ವಾ ಉತ್ಪತ್ತಿ ತಾಣಗಳ ನಾಶದ ಬಗ್ಗೆ ಡ್ರೈ ಡೇ ಮುಂಜಾಗ್ರತ ಕ್ರಮವಾಗಿ ಧರ್ಮಸ್ಥಳ ಗ್ರಾಮದ ಜನತಾ ಕಾಲೋನಿಗಳಿಗೆ, ಜನ ಬಿಡದಿ ಪ್ರದೇಶಗಳಲ್ಲಿ, ಮನೆಗಳಿಗೆ ಭೇಟಿ ನೀಡಿ ಕಟ್ಟಡದ ಮೇಲ್ಚಾವಣಿ ಗಿಡದ ಚಟ್ಟಿ, ನಿರುಪಯುಕ್ತ ವಸ್ತುಗಳು, ಟಬ್ಬುಗಳು ಬಕೆಟ್ ಗಳು ಇತ್ಯಾದಿ ಗಳಲ್ಲಿ ನೀರು ಸಂಗ್ರಹವಾಗಿರುವ ಬಗ್ಗೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಯಿತು.

ಡೆಂಗ್ಯೂ ಮಲೇರಿಯಾ ಇದರ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕ ಕ್ರಮವಾಗಿ ಪರಿಶೀಲನೆ ನಡೆಸಿ ಜನರಿಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಲೆಕ್ಕ ಸಹಾಯಕರಾದ ಶ್ರೀಮತಿ ಪ್ರಮೀಳಾ, ಸಂಜೀವಿನಿ ಒಕ್ಕೂಟದ ಶ್ರೀಮತಿ ಚಂದ್ರವತಿ, ಶ್ರೀಮತಿ ವೀಣಾ, ಗ್ರಂಥಪಾಲಕರದ ಶ್ರೀಮತಿ ಮಂಜುಳಾ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪಿ. ಜಯರಾಜ್ ಹೆಗ್ಡೆ ಅವಿರೋಧ ಆಯ್ಕೆ

Suddi Udaya

ಕಳಿಯ : ಕೊರಂಜ ಶಾಲೆಯ ಬಾವಿ ಹಾಗೂ ಆವರಣ ಗೋಡೆ ಮೇಲೆ ಮರ ಬಿದ್ದು ಹಾನಿ

Suddi Udaya

ಬೆಳ್ತಂಗಡಿ: ಗಾಳಿ ಮಳೆಗೆ 44 ವಿದ್ಯುತ್ ಕಂಬ ಧರಾಶಾಯಿ: ಅಪಾರ ಹಾನಿ

Suddi Udaya

ಕೊಯ್ಯೂರು ಸ.ಪ್ರೌ. ಶಾಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ

Suddi Udaya

ಲೋಕಸಭಾ ಚುನಾವಣೆ : ನಾಳೆ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

Suddi Udaya

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Suddi Udaya
error: Content is protected !!