
ಶಿಶಿಲ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧ ಮತ್ಸ್ಯ ತೀರ್ಥ ಎಂದೇ ಖ್ಯಾತವಾದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲ ನದಿಯು ಜು.18 ರಂದು ತುಂಬಿ ಹರಿಯುತ್ತಿದ್ದು ನದಿಯ ಪ್ರವಾಹ ದೇವಸ್ಥಾನದ ಒಳಗೆ ನುಗ್ಗಿತ್ತು. ಇದರ ಜೊತೆಗೆ ಪ್ರವಾಹದಲ್ಲಿ ದೊಡ್ಡ, ದೊಡ್ಡ ಗಾತ್ರದ ಮರಗಳು ಬರುತ್ತಿದ್ದು, ಶಿಶಿಲದ ಕಿಂಡಿಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಪ್ರವಾಹ ಹರಿಯಲು ಅಡ್ಡಿಯಾಗಿ ನೀರು ಏರುತ್ತಿದ್ದರಿಂದ ಶಿಶಿಲ ಗ್ರಾ.ಪಂ ಹಾಗೂ ದೇವಸ್ಥಾನದ ವತಿಯಿಂದ ಜು.19 ರಂದು ಹಿಟಾಚಿಯ ಮೂಲಕ ತೆರವು ಕಾರ್ಯ ನಡೆಯಿತು.