ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ಅಕ್ಷಯ ಮಹಾಸಂಘ ಶಿರಾಡಿ, ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ, ಗ್ರಾಮ ಪಂಚಾಯತ್ ಶಿರಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಾಡಿ, ಅರಣ್ಯ ಇಲಾಖೆ ಗುಂಡ್ಯ ಹಾಗೂ ಶಿರಾಡಿ ಇವರ ಸಹಯೋಗದೊಂದಿಗೆ ವನಮಹೋತ್ಸವ ಹಾಗೂ ಆರೋಗ್ಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಜು.18ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಾಡಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಮಹಾಸಂಘ ಅಧ್ಯಕ್ಷೆ ಶ್ರೀಮತಿ ಶ್ರೀವಿದ್ಯಾ ವಹಿಸಿದ್ದರು. ಗುಂಡ್ಯ ಅರಣ್ಯ ಇಲಾಖೆಯ ಗಾರ್ಡ್ ಚಂದ್ರು ಹಣ್ಣಿನ ಗಿಡವನ್ನು ವಿತರಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಚಂದ್ರಶೇಖರ್, ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಾಡಿ ಇವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಶಿರಾಡಿ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ವಂ.ಫಾ. ಜೋಸೆಫ್ ಶುಭ ಹಾರೈಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ. ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಅರಣ್ಯ ಇಲಾಖೆಯ ಗಾರ್ಡ್ ನಾಗರಾಜ್ ರವರು ಉಪಸ್ಥಿತರಿದ್ದರು. ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ವಠಾರದಲ್ಲಿ ಹಣ್ಣಿನ ಗಿಡವನ್ನು ನೆಡಲಾಯಿತು.
ಕಿರಣ್ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಡೈಸಿ ಜೋಯ್ ಸ್ವಾಗತಿಸಿದರು. ಅಕ್ಷಯ ಮಹಾಸಂಘ ಕಾರ್ಯದರ್ಶಿ ಶ್ರೀಮತಿ ದೀಪ್ತಿ ವಂದಿಸಿದರು. ಯೋಜನಾ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು.