ಮರೋಡಿ: ಮರೋಡಿ ಗ್ರಾಮಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಜುಲೈ19 ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಗ್ರಾಮ ಸಭೆಯನ್ನು ನಡೆಸಿಕೊಟ್ಟರು.
ಮರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳಿದ್ದು ಆದಷ್ಟೂ ಜನರು ತನ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಆಶಾ ಕಾರ್ಯಕರ್ತರು ಮನೆ ಭೇಟಿ ನೀಡುವಾಗ ಆರೋಗ್ಯ ಸಮಸ್ಯೆಯನ್ನು ತಿಳಿಸಬೇಕಾಗಿ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದರು.
ಕನ್ಯಾನ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ತುಂಬಾ ಇಳಿಮುಖವಾಗಿದೆ. ಆದಷ್ಟು ಬೇಗ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಯನ್ನು ಒತ್ತಾಯಿಸಿದರು.
ಮರೋಡಿಯಲ್ಲಿ ಸಮರ್ಪಕವಾಗಿ ಗೃಹಲಕ್ಮಿ ಯೋಜನೆ ನಡೆಯುತ್ತಿಲ್ಲ. ಅರ್ಧಕಿಂತ ಹೆಚ್ಚಿನ ಜನರಿಗೆ ಸಿಗುತ್ತಿಲ್ಲ. ಕೆಲವರು ಐದಾರು ಬಾರಿ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ.ಯಾರಿಗೆ ಬರುವುದಿಲ್ಲವೆಂದು ಸರ್ವೆ ಮಾಡುವ ಕೆಲಸ ನಡೆಯಬೇಕಿದೆ. ಬೇಕಾದರೇ ಪಂಚಾಯತ್ ನಲ್ಲಿ ಕ್ಯಾಂಪ್ ಮಾಡೋಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್ ಹೇಳಿದರು.
ಮಳೆಗಾಳದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಘನಗಾತ್ರದ ವಾಹನ ಸಂಚಾರದಿಂದ ರಸ್ತೆ ಹಾಳಾಗುತ್ತಿದೆ ದುರಸ್ತಿಗೆ ರಮೇಶ್ ಅವರು ಒತ್ತಾಯಿಸಿದರು.
ನಮ್ಮ ವ್ಯಾಪ್ತಿಯಲ್ಲಿ ಎರಡು ಕ್ರೆಶೆರ್ ಇದೆ. ದಿನ 10 ಚಕ್ರದ ವಾಹನ ಸಂಚಾರವಾಗುತ್ತಿದೆ.ಅವರಿಂದ ರಸ್ತೆ ಹಾಳಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಮೂಲಕ ಸರಿಪಡಿಸುವ ಎಂದು ಪಂಚಾಯತ್ ಅಧ್ಯಕ್ಷರು ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಸ್ವಾಗತಿಸಿ, ವರದಿ ಮಂಡಿಸಿದರು. ವಾರ್ಡ್ ಸಭೆಗಳಲ್ಲಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಗಣೇಶ್ ಅವರು ಸಭೆಗೆ ತಿಳಿಸಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ವಿತರಿಸಿದರು.
ಪಂಚಾಯತ್ ಉಪಾಧ್ಯಕ್ಷ ಶುಭರಾಜ ಹೆಗ್ಡೆ, ಸದಸ್ಯರಾದ ಪದ್ಮಶ್ರೀ ಜೈನ್, ಯಶೋಧರ ಆಚಾರ್ಯ, ಅಶೋಕ್ ಪೂಜಾರಿ, ಉಮೇಶ್ ಸಾಲಿಯಾನ್, ಧನಲಕ್ಷ್ಮಿ, ಉಮಾವತಿ, ಶಮಿತಾ, ಸುನಂದ, ಯಶೋಧ ಉಪಸ್ಥಿತರಿದ್ದರು.