39.4 C
ಪುತ್ತೂರು, ಬೆಳ್ತಂಗಡಿ
April 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿಯಲ್ಲಿ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾಳು ಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವು ಜು.20 ರಂದು ಕೆದ್ದು ಶ್ರೀ ದೀಪಾ ಸಭಾಭವನದಲ್ಲಿ ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕರಾವಳಿ ಕೃಷಿಕೆ ಪೂರಕ ವಾತಾವರಣವಿದೆ. ಯುವ ಮನಸ್ಸುಗಳು ಹೆಚ್ಚೆಚ್ಚು ಕೃಷಿಯ ಕಡೆ ಆಕರ್ಷಿತರಾಗಬೇಕು.‌ಕೃಷಿಕರಿಗೆ ಕಾಳುಮೆಣಸು,ಜಾಯಿಕಾಯಿ ಕೃಷಿ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಸಿ ವಿತರಣೆ ಕಾರ್ಯಕ್ರಮವನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ನೆರವೇರಿಸಿ ಮಾತನಾಡಿ ಕೃಷಿಯಿಂದ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಕುಟುಂಬಗಳು ಇಂದು ಸುಂದರ ಜೀವನ ನಡೆಸುತ್ತಿದ್ದಾರೆ.ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕೃಷಿ ಮಾಡಿದರೆ ಇಳುವರಿಯನ್ನು ಹೆಚ್ಚಿಸಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ ಬಿ.ವಿ., ಬೆಳ್ತಂಗಡಿ ತೋಟಗಾರಿಕಾ ಇಲಾಖೆಯ ಬಿಮರಾಯ್, ಬಳಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶೋಭಾ ಕುಲಾಲ್, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಸುಲ್ಕೇರಿ ಗ್ರಾ.ಪಂ.ಉಪಾಧ್ಯಕ್ಷ ಶುಭಕರ ಪೂಜಾರಿ, ಸಂಪನ್ಮೂಲ ವ್ಯಕ್ತಿಗಳಾಗಿ ಯಶಸ್ವಿ ಕಾಳು ಮೆಣಸು ಕೃಷಿಕ ಸುರೇಶ್ ಬಲ್ನಾಡು, ಜಾಯಿಕಾಯಿ ಕೃಷಿ ಸಾಧಕ ಟಿ.ಆರ್. ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಾಳು ಮೆಣಸು, ಸಿಲ್ವರ್ ವೋಕ್, ಕಾಫಿ ಬೆಳೆಗಾರ ಅಜಿತ್ ಪ್ರಸಾದ್ ರೈ ಕಾಯರ್‌ತಡಿ, ಪುತ್ತೂರು, ಅಳದಂಗಡಿ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೀರಾ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಂಕರ್ ಭಟ್ ಕಟ್ಟೂರು, ಈಶ್ವರ ಪೂಜಾರಿ ಬಿರ್ಮಜಿ – ಕುದ್ಯಾಡಿ ರವರನ್ನು ಸನ್ಮಾನಿಸಲಾಯಿತು‌ ಹಾಗೂ ಸಂಘದ ಸದಸ್ಯರಿಗೆ ಉಚಿತ ಕಾಳು ಮೆಣಸಿನ ಗಿಡಗಳನ್ನು ವಿತರಿಸಲಾಯಿತು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಜನಾರ್ಧನ ಪೂಜಾರಿ,ನಿರ್ದೇಶಕರಾದ ಗುರುಪ್ರಸಾದ್ ಹೆಗ್ಡೆ,ಹೇಮಂತ್,ಕೊರಗಪ್ಪ,ದೇವಿಪ್ರಸಾದ್ ಶೆಟ್ಟಿ,ದಿನೇಶ್ ಪಿ‌ಕೆ,ದೇಜಪ್ಪ ಪೂಜಾರಿ,ಧರ್ಣಪ್ಪ,ಶ್ರೀಮತಿ ಸುಂದರಿ,ಶ್ರೀಮತಿ ಸುಂದರಿ, ಶ್ರೀಮತಿ ಮಮತಾ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಅಧ್ಯಕ್ಷ ರಾಕೇಶ್ ಹೆಗ್ಡೆ ಸ್ವಾಗತಿಸಿದರು, ಸಮೀಕ್ಷಾ ಪೂಜಾರಿ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು,ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ವಂದಿಸಿದರು.ದಿನೇಶ್ ಪಿ‌ಕೆ, ವಿಶ್ವನಾಥ ಹೊಳ್ಳ ಸನ್ಮಾನಿತರನ್ನು ಪರಿಚಯಿಸಿದರು‌.

Related posts

ಫೆ.7-10: ಶ್ರೀ ಕ್ಷೇತ್ರ ಒಟ್ಲದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಮುಂಡತ್ತೊಡಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ವತಿಯಿಂದ ವನಮಹೋತ್ಸವ

Suddi Udaya

ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು, ಆಹಾರ- ಔಷಧ ಕಿಟ್ ವಿತರಣೆ

Suddi Udaya

ಉಜಿರೆ ಎರ್ನೋಡಿಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಧರ್ಮಸ್ಥಳಕ್ಕೆ ಮದುವೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಅಪಘಾತ: 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ