ಬಂದಾರು ಗ್ರಾ.ಪಂ. ನಲ್ಲಿ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯ ಬಿತ್ತಿ ಪತ್ರ ಅನಾವರಣ

Suddi Udaya

ಬೆಳ್ತಂಗಡಿ : ಯೇನಪೋಯ ಮೆಡಿಕಲ್ ಕಾಲೇಜು, ಯೇನಪೋಯ ವಿಶ್ವವಿದ್ಯಾಲಯ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯೋಗದ ಜಾಗೃತಿ ಮೂಡಿಸಲು ಭವಿಷ್ಯದ ದುಃಖಗಳನ್ನು ದೂರ ಮಾಡಲು ಯೋಗ ಎಂಬ ಧ್ಯೇಯ ದೊಂದಿಗೆ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯು ಜುಲೈ 22 ರಿಂದ ಜುಲೈ 23 ರವರೆಗೆ 10 ಗಂಟೆಯವರೆಗೆ 25 ಗಂಟೆಗಳ ನಿರಂತರ ಯೋಗ ತರಬೇತಿ ನಡೆಯಲಿದ್ದು ಇದರ ಭಿತ್ತಿ ಪತ್ರಿಕೆ ಅನಾವರಣವು ಬಂದಾರು ಗ್ರಾ.ಪಂ. ನಲ್ಲಿ ನಡೆಯಿತು.

ಯೋಗ ಗುರು ಕುಶಾಲಪ್ಪ ಗೌಡ ರವರು ತಲಾ ಒಂದೂವರೆ ಗಂಟೆಯ 17 ಬ್ಯಾಚ್ ಗಳಲ್ಲಿ ತರಬೇತಿ ನೀಡಲಿದ್ದು, ಭಾಗವಹಿಸುವ ಶಿಬಿರಾರ್ಥಿಗಳಿಗೆ ರೂಪಾಯಿ 500 ಮೌಲ್ಯದ ಯೋಗ ಪುಸ್ತಕ, ಯೋಗ ಭಟ್ಟೆ, ಯೋಗ ಕ್ಯಾಲೆಂಡರ್,ಯೋಗ ಪ್ರಮಾಣ ಪತ್ರ ಮತ್ತು ಉಪಹಾರ ನೀಡಲಾಗುವುದು,

ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ನಾ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ರೂಪಾಯಿ 100, ಸಾರ್ವಜನಿಕರಿಂದ ರೂಪಾಯಿ 200 ನ್ನು ದೇಣಿಗೆ ರೂಪದಲ್ಲಿ ಪಡೆಯಲಾಗುವುದು. ಮೂರು ವಿಶ್ವ ದಾಖಲೆಯ ಪ್ರಯತ್ನ, ಮ್ಯಾರಥಾನ್ ಯೋಗ ಶಿಬಿರ ತರಬೇತಿಯ ಮೂಲಕ ಮೂರು ವಿಶ್ವ ದಾಖಲೆಯನ್ನು ಸಾರಿಸಲು ಪ್ರಯತ್ನಿಸಲಾಗುವುದು, ಒಂದೇ ಯೋಗ ಗುರು, ಒಂದೇ ವೇದಿಕೆಯಲ್ಲಿ ನಿರಂತರ 25 ಗಂಟೆ ಯೋಗ ತರಬೇತಿ ನೀಡುವುದು.

ಈ ತರಬೇತಿಯಲ್ಲಿ 2500 ಕ್ಕೂ ಮಿಕ್ಕಿ ವಿವಿಧ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿ ಒಳಗಾಗುವುದು, 4000ಕ್ಕೂ ಮಿಕ್ಕಿ ಯೋಗ ಶಿಬಿರಾರ್ಥಿಗಳಿಗೆ ತರಬೇತಿ ಪಡೆಯಲಿದ್ದಾರೆಂದು ಟ್ರಸ್ಟಿಗಳಾದ ಬಾಲಕೃಷ್ಣ ಗೌಡ ಮುಗೇರಡ್ಕ, ರಮೇಶ್ ಗೌಡ ನೆಕ್ಕರಾಜೆ, ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಹಳೆ ವಿದ್ಯಾರ್ಥಿ ದುಷ್ಯಂತ ಗೌಡ, ವಿನಯ ಕುಮಾರ್ ಬರುಗುಡೆಲ್ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!