24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆ ಸಿ ಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ಚಿತ್ತಾರ ಕಾರ್ಯಕ್ರಮ

ಕೊಕ್ಕಡ : ಜೆ ಸಿ ಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ಚಿತ್ತಾರ 2024 ಕಾರ್ಯಕ್ರಮವು ಜು.20 ರಂದು ಸಂತ ಜಾನರ್ ಹಿರಿಯ ಪ್ರಾಥಮಿಕ ಶಾಲೆ ಕೌಕ್ರಾಡಿ ( ಕೊಕ್ಕಡ ) ಎಂಬಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಸಂತೋಷ್ ಜೈನ್ ವಹಿಸಿದ್ದರು. ಅದ್ವಿತ್ ಜೈನ್ ಜೆಸಿ ವಾಣಿ ವಾಚಿಸಿದರು. ಸಂಚಾಲಕರಾದ ವಂ. ಫಾ. ಅನಿಲ್ ಪ್ರಕಾಶ್ ಡಿ ಸಿಲ್ವಾ ಉದ್ಘಾಟಿಸಿ ಶುಭ ಹಾರೈಸಿದರು. ಜೆಸಿಂತಾ ಡಿಸೋಜ ಹಾಗೂ ಶೋಭಾ ಪಿ ಅವರು ಅತಿಥಿಗಳನ್ನು ಪರಿಚಯಿಸಿದರು.

ಮುಖ್ಯ ಶಿಕ್ಷಕಿ ಜೆನೆವಿವ್ ಫೆರ್ನಾಂಡಿಸ್ ವಿಜೇತ ಮಕ್ಕಳ ವಿವರವಿತ್ತರು, ಪುತ್ತೂರಿನ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪ್ರವೀಣ್ ವರ್ಣಕುಟೀರ ನೇತೃತ್ವದಲ್ಲಿ ಸುಮಾರು 50 ಮಕ್ಕಳಿಗೆ ಚಿತ್ರಕಲೆ ತರಬೇತಿ ನಡೆಸಲಾಯಿತು. ಗ್ರೀಟಿಂಗ್ಸ್ ತಯಾರಿ, ಮಾರ್ಬಲ್ ಆರ್ಟ್ಸ್, ಪೈಯಿಂಟ್ಸ್ ಕುರಿತು ತರಬೇತಿ ಜೆಸಿ ವತಿಯಿಂದ ಶಿಬಿರವನ್ನು ಆಯೋಜಿಸಲಾಯಿತ್ತು, ಹಲವು ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ಜೋಸೆಫ್ ಪಿರೇರ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ನಿಕಟ ಪೂರ್ವ ಅಧ್ಯಕ್ಷ ಜಿತೇಶ್ ಎಲ್ ಪಿರೇರ, ಯುವ ಜೆಸಿ ಅಧ್ಯಕ್ಷ ಹರ್ಷಿತ್, ಮಕ್ಕಳ ಜೆಸಿ ಅಧ್ಯಕ್ಷ ವಿವಿಯನ್ ಸುವಾರಿಸ್, ಘಟಕದ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೆ ಸಿ ವತಿಯಿಂದ ಪೂರ್ವಭಾವಿ ಸಾಮಾನ್ಯ ಸಭೆ ನಡೆಸಲಾಯಿತು, ಕಾರ್ಯದರ್ಶಿ ಅಕ್ಷತ್ ರೈ ವಂದಿಸಿದರು.

Related posts

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಜಿಲ್ಲಾ ಮಟ್ಟದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಡಾ ರವಿಕುಮಾರ್ ವಿತರಿಸಿದರು.

Suddi Udaya

ಅಧಿಕಾರಿಗಳಿಂದ ನಮಗೆ ಮಾನಸಿಕ ಹಿಂಸೆ : ಗಿರಿಯಪ್ಪ ಗೌಡ ನಾಗನಡ್ಕ ಆರೋಪ

Suddi Udaya

ಬಳಂಜ : 90 ವರ್ಷದ ವೆಂಕಮ್ಮ ರವರಿಂದ ಮತ ಚಲಾವಣೆ

Suddi Udaya

ಬೆಳ್ತಂಗಡಿ ತಾ.ಪಂ. ನಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya

ತಣ್ಣೀರುಪಂತ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!