28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

ಕನ್ಯಾಡಿ : ಕಿರಣ್ ಅಗ್ರೋಟೆಕ್ ನ ಮಾಲಿಕರಾದ ಪ್ರಕಾಶ್ ಬಿ.ಕೆ ನಿಡ್ಲೆ ಇವರು ಜು.20 ರಂದು ಸೇವಾಭಾರತಿ ಕನ್ಯಾಡಿಯ ಕಚೇರಿಗೆ ಭೇಟಿ ನೀಡಿ, ಸೊಳ್ಳೆಯನ್ನು ಮುಕ್ತಮಾಡುವ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್ ) ಯಂತ್ರವನ್ನು ಸೇವಾಧಾಮಕ್ಕೆ ಕೊಡುಗೆಯಾಗಿ ನೀಡಿದರು.

ಇವರು ಸೇವಾಭಾರತಿ/ ಸೇವಾಧಾಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ,ಈ ಹಿಂದಿನಂತೆ ಮುಂದೆಯೂ ಸೇವಾಕಾರ್ಯಗಳಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿ ಯಂತ್ರವನ್ನು ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರಾದ ರಜತ್ ರಾವ್ ಇವರಿಗೆ ಹಸ್ತಾಂತರಿಸಿದರು. ರಜತ್ ರಾವ್ ಫಲಾನುಭವಿಗಳು ಮತ್ತು ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಸೇವಾಭಾರತಿಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.ಉಜಿರೆಯಲ್ಲಿ ಮುಖ್ಯ ಸೇವಾಕೇಂದ್ರವಿದ್ದು, ಕೊಕ್ಕಡದಲ್ಲೂ ಸೇವಾವಿಭಾಗ ಹೊಂದಿರುವ ಇವರು ಕೃಷಿಕರ ಅಶೋತ್ತರಗಳಿಗೆ ಶ್ರಮಿಸುವಲ್ಲಿ ಸಾಫಲ್ಯ ಕಂಡಿದೆ.

Related posts

ಗುರುವಾಯನಕೆರೆ ವ್ಯಾಪ್ತಿಯಲ್ಲಿ ದಾಖಲೆಗಳಿದ್ದ ಪರ್ಸ್ ಕಳೆದುಹೋಗಿದೆ: ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವಿಧಾನ ಸಭಾ ಕ್ಷೇತ್ರ ಸಮಿತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧ ನಮನ ಕಾರ್ಯಕ್ರಮ

Suddi Udaya

ಮಚ್ಚಿನ ಗ್ರಾ.ಪಂ. ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಸೋಮಾವತಿ ಆಯ್ಕೆ

Suddi Udaya

ಧರ್ಮಸ್ಥಳ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಬೆಳ್ಳಿಹಬ್ಬ ಸಂಭ್ರಮ: ರಜತ ಸಂಚಿಕೆ ಲೋಕಾರ್ಪಣೆ – ಸಾಧಕರಿಗೆ ಸನ್ಮಾನ

Suddi Udaya
error: Content is protected !!