23.5 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿ

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

ವೇಣೂರು :ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವೇಣೂರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ವನ್ನು ವೇಣೂರು ವಲಯದಲ್ಲಿ ಆಯೋಜಿಸಲಾಯಿತು ಜಿಲ್ಲಾ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್ ಕಾರ್ಯಕ್ರಮಗಳನ್ನ ಸಂಘಟಿಸುವಲ್ಲಿ ಪದಾಧಿಕಾರಿಗಳ ಪಾತ್ರದ ಕುರಿತು ತರಬೇತಿಯನ್ನ ನೀಡಿದರು
ನಾಯಕತ್ವ ವನ್ನ ವಹಿಸಿ ಕೊಂಡವರು ಸಮಾಜಮುಖಿ ಯಾಗಿ ಕೆಲಸ ಮಾಡಬೇಕು ಪದಾಧಿಕಾರಿಗಳು ಎಲೆಕ್ಷನ್ ಮೂಲಕ ಆಯ್ಕೆಯಾದವರು ಅಲ್ಲ ಬದಲಾಗಿ ಜನರ ಮೂಲಕ ಸೆಲೆಕ್ಷನ್ ಆಯ್ಕೆಯಾಗಿದ್ದಾರೆ ಸ್ವ ಇಚ್ಛೆಯಿಂದ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ನಿಯಮದ ಡಿಯಲ್ಲಿ ಜನರಿಗೆ ಸೇವೆ ನೀಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಶ್ರೀ ಸುರೇಶ್ ಮೊಯ್ಲಿ ಯವರು ಹೇಳಿದರು ಅವರು ನಾಯಕತ್ವ ಹಾಗೂ ಸಂವಹನ ಕುರಿತಾಗಿ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು ನಿಕಟ ಪೂರ್ವ ವಲಯ ಅಧ್ಯಕ್ಷರಾದ ಜಯಶಂಕರ್ ಹೆಗ್ಡೆ ತರಬೇತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು
ಒಕ್ಕೂಟ ಸಭೆ ನಡೆಸುವ ವಿಧಾನ ಹಾಗು ಜವಾಬ್ದಾರಿಗಳ ಕುರಿತು ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿಯವರು ತರಬೇತಿ ನೀಡಿದರು ವೇಣೂರು ವಲಯದ ನೂತನ ಒಕ್ಕೂಟದ ವಲಯ ಅಧ್ಯಕ್ಷರಾಗಿ ಬಜಿರೆ ಒಕ್ಕೂಟದ ಅಧ್ಯಕ್ಷರಾದ ಗಿರೀಶ್ ರವರು ಆಯ್ಕೆಯಾದರು ವಲಯ ಮೇಲ್ವಿಚಾರಕ ರಾದ ಶ್ರೀಮತಿ ಶಾಲಿನಿ ಕಾರ್ಯಕ್ರಮವನ್ನ ನಿರ್ವಹಿಸಿದರು ಮುಡುಕೊಡಿ ಸೇವಾ ಪ್ರತಿನಿಧಿ ಸುನೀತ ಸ್ವಾಗತಿಸಿದರು

Related posts

ಮಡಂತ್ಯಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಬೆಳ್ತಂಗಡಿಯ ‘ಆಲ್ಫಾ ಕೋಟ್’ ನಿವಾಸಿ ಮೇರಿ ಮಾಡ್ತಾ ನಿಧನ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜು ವಿದ್ಯಾರ್ಥಿ ಮಂತ್ರಿ ಮಂಡಲದ ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ: ನಡ ಕಾಲೇಜಿನ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕೊಕ್ಕಡ ಡೇವಿಡ್ ಜೈಮಿ ರವರ ಮನೆಗೆ ಡೆಪ್ಯೂಟಿ ರಬ್ಬರ್ ಪ್ರೊಡಕ್ಷನ್ ಕಮೀಷನರ್ ಭೇಟಿ

Suddi Udaya
error: Content is protected !!