29.6 C
ಪುತ್ತೂರು, ಬೆಳ್ತಂಗಡಿ
May 17, 2025
ತಾಲೂಕು ಸುದ್ದಿ

ಉಜಿರೆಯ ಕಿರಣ್ ಆಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್ ಯಂತ್ರದ ಕೊಡುಗೆ

ಕನ್ಯಾಡಿ : ಕಿರಣ್ ಅಗ್ರೋಟೆಕ್ ನ ಮಾಲಿಕರಾದ ಪ್ರಕಾಶ್ ಬಿ.ಕೆ ನಿಡ್ಲೆ ಇವರು ಜು.20 ರಂದು ಸೇವಾಭಾರತಿ ಕನ್ಯಾಡಿಯ ಕಚೇರಿಗೆ ಭೇಟಿ ನೀಡಿ, ಸೊಳ್ಳೆಯನ್ನು ಮುಕ್ತಮಾಡುವ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್ ) ಯಂತ್ರವನ್ನು ಸೇವಾಧಾಮಕ್ಕೆ ಕೊಡುಗೆಯಾಗಿ ನೀಡಿದರು.

ಇವರು ಸೇವಾಭಾರತಿ/ ಸೇವಾಧಾಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ,ಈ ಹಿಂದಿನಂತೆ ಮುಂದೆಯೂ ಸೇವಾಕಾರ್ಯಗಳಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿ ಯಂತ್ರವನ್ನು ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರಾದ ರಜತ್ ರಾವ್ ಇವರಿಗೆ ಹಸ್ತಾಂತರಿಸಿದರು.

ರಜತ್ ರಾವ್ ಫಲಾನುಭವಿಗಳು ಮತ್ತು ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು.ಈ ಸಂದರ್ಭದಲ್ಲಿ ಸೇವಾಭಾರತಿಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಉಜಿರೆಯಲ್ಲಿ ಮುಖ್ಯ ಸೇವಾಕೇಂದ್ರವಿದ್ದು, ಕೊಕ್ಕಡದಲ್ಲೂ ಸೇವಾವಿಭಾಗ ಹೊಂದಿರುವ ಇವರು ಕೃಷಿಕರ ಅಶೋತ್ತರಗಳಿಗೆ ಶ್ರಮಿಸುವಲ್ಲಿ ಸಾಫಲ್ಯ ಕಂಡಿದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಿಂದ ತಾಲೂಕಿನ ಸಾಧಕ ಮಹಿಳೆಯರಿಗೆ ಪಂಚರತ್ನ ಪ್ರಶಸ್ತಿ ಪುರಸ್ಕಾರ

Suddi Udaya

ಧರ್ಮಸ್ಥಳ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ಮತ್ತು ಉಪನ್ಯಾಸಕರುಗಳ ವಾರ್ಷಿಕ ಕಾರ್ಯಾಗಾರ

Suddi Udaya

ದೇವಿಕಿರಣ್ ಕಲಾನಿಕೇತನ ಸಂಸ್ಥೆಗೆ ಭರತನಾಟ್ಯ ಜೂನಿಯರ್ ಹಾಗೂ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಚಾರ್ಮಾಡಿ : ಬಂಟ್ವಾಳ ಗ್ರಾಮದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಬೆಳ್ತಂಗಡಿ : ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಮ್ ರವರ 117ನೇ ಜನ್ಮ ದಿನಾಚರಣೆ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಬೆ

Suddi Udaya
error: Content is protected !!