ಬೆಳ್ತಂಗಡಿ : ಜು.20.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 30 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಾಣಿ ಪ್ರೌಢ ಆಂಗ್ಲ ಮಾಧ್ಯಮ 2023-24 ನೇ ಸಾಲಿನ ಹತ್ತನೇ ತರಗತಿಯ 8 ವಿದ್ಯಾರ್ಥಿಗಳು ತುಳು ಶಿಕ್ಷಣ ವಿಭಾಗದ ಹತ್ತನೇ ತರಗತಿಯಲ್ಲಿ ಶೇಕಡಾ 100 ಆಂಕ ಗಳಿಸಿದರು.
ಗುರಪ್ರಸಾದ್,ರಕ್ಷಿತ್ ಜಿ, ದೀಪಕ್,ಅನೀಶ್,ಶ್ರೇಯಸ್,ವಿಮಾರ್ಶಾ ಪಿ.ಶೆಟ್ಟಿ, ಸೃಜನ್ಯಾ,ಚರಿಷ್ಮಾ 8 ವಿದ್ಯಾರ್ಥಿಗಳನ್ನು ಗೌರವಿಸಿ, ಶಿಕ್ಷಕಿ ಸಂಧ್ಯಾ.ಜೆ.ಪಿ.ಶೆಟ್ಟಿಯವರನ್ನು ತುಳು ಆಕಾಡೆಮಿ 30 ನೇ ವರ್ಷದ ಸಂಭ್ರಮೋತ್ಸವದ ವತಿಯಿಂದ ವೇದಿಕೆಯಲ್ಲಿ ಜು.20 ರಂದು ಶಾಲು ಹೊದಿಸಿ ಸನ್ಮಾನಿಸಿ,ವಾಣಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೆಳ್ತಂಗಡಿ ವಾಣಿ ಪ್ರೌಢ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ,ಕನ್ನಡ ಮಾಧ್ಯಮದ ಜೊತೆಯಲ್ಲಿ ತುಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ,ಕಳೆದ 7 ವರ್ಷಗಳಿಂದ ತುಳು ಶಿಕ್ಷಣ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ಪಡೆಯುತ್ತಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿ ಸತತ 3 ನೇ ಭಾರಿ ಹಾಗೂ ಈ ಹಿಂದೆ ಪುತ್ತೂರು ತಾಲೂಕಿನ ರಾಮಕುಂಜೇಶ್ವರ ಫ್ರೌಡ ಶಾಲೆಯಲ್ಲಿ 2022-23 ಸಾಲಿನಲ್ಲಿ ಗೌರವ ಪ್ರಶಸ್ತಿ ಹಾಗೂ ಕೊಯ್ಯೂರು ಫ್ರೌಡ ಶಾಲೆಯಲ್ಲಿ ಆಯೋಜಿಸಿದ ತುಳು ಜಾನಪದ ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳು ಮತ್ತು ತುಳು ಶಿಕ್ಷಕಿಯವರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಾಣಿ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯಲ್ಲಿ ಕಳೆದ 7 ವರ್ಷಗಳಿಂದ ತುಳು ಶಿಕ್ಷಣದ ಬೋಧನೆ ಮಾಡಲು ವಾಣಿ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಹಾಗೂ ಪೋಷಕರು ಪ್ರೋತ್ಸಾಹದಿಂದ ಪ್ರತಿ ವರ್ಷವೂ ಹೆಚ್ಚಿನ ಮಕ್ಕಳು ಶೇಕಡಾ 100 ಆಂಕ ಗಳಿಸುವಂತೆ ಪ್ರೋತ್ಸಾಹ ನೀಡುತ್ತಾರೆ.
ಗೇರುಕಟ್ಟೆಯಲ್ಲಿ ದಿನ ಪತ್ರಿಕೆ ಹಾಗೂ ವಾರಪತ್ರಿಕೆ ವಿತರಕರಾದ ಕೊರಂಜ ಜಯಪ್ರಕಾಶ್ ಶೆಟ್ಟಿಯವರ ಧರ್ಮಪತ್ನಿ ಸಂಧ್ಯಾ ತುಳು ಶಿಕ್ಷಣ ಶಿಕ್ಷಕಿಯಾಗಿದ್ದಾರೆ.
previous post