23.7 C
ಪುತ್ತೂರು, ಬೆಳ್ತಂಗಡಿ
May 19, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಕಾಶಿಪಟ್ಣ : ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಾಶಿಪಟ್ಣ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಕಾಶಿಪಟ್ಣ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಶೈಲೇಶ್ ಕೆ ಎಸ್ ಮೇಗಿನ ಬರೆಂಜ ,ಉಪಾಧ್ಯಕ್ಷರಾಗಿ ಅಮರನಾಥ ಪೂಜಾರಿ ಹಿಮರಡ್ಡ , ಮನೋಜ್ ಕೆ ರಾಮರತ್ನ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕೆ ಸಾಲ್ಯಾನ್ ಕಾಶಿಪಟ್ಣ, ಜೊತೆ ಕಾರ್ಯದರ್ಶಿಯಾಗಿ ಕಾರ್ತಿಕ್ ಶಿವಗಿರಿ ನಗರ, ಕೋಶಾಧಿಕಾರಿಯಾಗಿ ಸುದೀಪ್ ಗುರುಪ್ರಭಾ ಇವರುಗಳು ಸರ್ವಾನುಮತಗಳಿಂದ ಆಯ್ಕೆಯಾದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ ಪರಪ್ಪು, ಗೌರವ ಸಲಹೆಗಾರರಾದ ಅಶೋಕ್ ಕೋಟ್ಯಾನ್ ಪಡ್ಯೋಡಿ, ಸ್ಥಾಪಕಾಧ್ಯಕ್ಷರಾದ ನಾಗೇಶ್ ಸಾಲ್ಯಾನ್ ಮೂಲ್ಡೊಟ್ಟು, ಗೌರವಾಧ್ಯಕ್ಷರಾದ ಹರೀಶ್ ಪಿ ಕೋಟ್ಯಾನ್ ಪಣಿಲಾಜೆ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಯಾದ ಹರಿಕಾಂತ್ ಎಸ್ ಸೃಷ್ಟಿ ನಿವಾಸ ಇವರುಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಸಮಿತಿಯ ಸದಸ್ಯರುಗಳು ಹಾಜರಿದ್ದರು, ನೂತನ ಅಧ್ಯಕ್ಷರಾದ ಶೈಲೇಶ್ ಕೋಟ್ಯಾನ್ ರವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು ಹಾಗೂ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ ಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಿಕಟ ಪೂರ್ವ ಕಾರ್ಯದರ್ಶಿ ಹರಿಕಾಂತ್ ಎಸ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಹರೀಶ್ ಕೆ ಸಾಲ್ಯಾನ್ ರವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು

ಸ್ಥಳ:

Related posts

ಅಂಚೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ಉಜಿರೆ: ಕುಂಜರ್ಪ ನಿವಾಸಿ ಆನಂದ ಪೂಜಾರಿ ನಿಧನ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಮಾಜಿ ಶಾಸಕ ದಿ| ವಸಂತ ಬಂಗೇರರಿಗೆ ನುಡಿನಮನ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಹಿಂದಿನ ಉಪಾಧ್ಯಕ್ಷೆ ಶಕುಂತಲಾ ಆಚಾರ್ ರಿಗೆ ಬೀಳ್ಕೊಡುಗೆ

Suddi Udaya

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya

ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya
error: Content is protected !!