April 2, 2025
Uncategorized

ಉಜಿರೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ

ಉಜಿರೆ : ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ; ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವಸಂಪನ್ನವಾಗಿದೆ. ಈ ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ. ಪ್ರಭು ಶ್ರೀರಾಮಚಂದ್ರ ಕೂಡ ತಮ್ಮ ಗುರುಗಳ ಆಶೀರ್ವಾದ ಪಡೆದು ಆದರ್ಶ ರಾಮರಾಜ್ಯದ ಸ್ಥಾಪನೆಯನ್ನು ಮಾಡಿದ್ದರು. ಈಗ ನಾವೂ ಇಂತಹ ಆದರ್ಶ ರಾಜ್ಯದ ಸ್ಥಾಪನೆಗಾಗಿ ಸುಸಂಸ್ಕೃತ ಆಚರಣೆಗಳೊಂದಿಗೆ ಪ್ರತಿದಿನ ಪ್ರಭು ಶ್ರೀರಾಮನಿಗೆ ಪ್ರಾರ್ಥನೆಯನ್ನು ಮಾಡೋಣ ಎಂದು ಸನಾತನ ಸಂಸ್ಥೆಯ ಸೌ. ಮಂಜುಳಾ ಈ ಸಮಯದಲ್ಲಿ ಕರೆ ನೀಡಿದರು.

ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದರೊಂದಿಗೆ ಜಿಲ್ಲೆಯ ಮಂಗಳೂರು, ಬಂಟ್ವಾಳದಲ್ಲಿ ಮತ್ತು ದೇಶದಾದ್ಯಂತ 71 ಸ್ಥಳಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿತ್ತು. 300 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಲಾಭ ಪಡೆದರು. ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ ನೆರವೇರಿಸಲಾಯಿತು.

ಗುರುಗಳ ಮಾರ್ಗದರ್ಶನದಿಂದ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ – ನ್ಯಾಯವಾದಿ ಈಶ್ವರ ಕೊಟ್ಟಾರಿ

ಭಾರತ ಭೂಮಿಯಲ್ಲಿ ಜನ್ಮ ಪಡೆಯಬೇಕಾದರೆ ಪುಣ್ಯ ಮಾಡಿರಬೇಕು. ಹಿಂದೆ ಹೇಗೆ ನಮ್ಮ ದೇಶ ರಾಮ ರಾಜ್ಯವಾಗಿತ್ತು ಆ ಸಮಯದಲ್ಲಿ ಎಲ್ಲಾ ಜನರು ಸುಖಿಗಳಾಗಿದ್ದರು. ನಮ್ಮ ದೇಶ ಈಗ ಭ್ರಷ್ಟಾಚಾರ,ಅನೈತಿಕತೆ, ಮೀಸಲಾತಿ, ಚಳುವಳಿ ಇತ್ಯಾದಿಗಳಿಂದ ಜೀವನ ಕಷ್ಟಕರವಾಗಿದೆ ಎಂದರು.ಆದರೆ ಇವೆಲ್ಲವುಗಳಿಗೆ ನಾವು ವಿರೋಧಿಸದೆ ಹೊಂದಿಕೊಂಡಿದ್ದೇವೆ. ಇವೆಲ್ಲವುಗಳಿಗೆ ಒಂದೇ ಪರಿಹಾರ, ನಾವೆಲ್ಲರೂ ಆದ್ಯಾತ್ಮಿಕ ಸಾಧನೆ ಮಾಡಿ ಇದನ್ನು ಎದುರಿಸಬಹುದು. ಇದಕ್ಕೆ ಗುರುಗಳ ಮಾರ್ಗದರ್ಶನ ಬೇಕು. ಈ ಮಾರ್ಗದರ್ಶನವನ್ನು ಸನಾತನ ಸಂಸ್ಥೆಯು ಸಮಾಜಕ್ಕೆ ಪರಿಪೂರ್ಣವಾಗಿ ನೀಡುತ್ತದೆ. ಅದರ ಲಾಭವನ್ನು ಪಡೆದುಕೊಂಡು ಆದರ್ಶ ಸಮಾಜದ ನಿರ್ಮಾಣ ಮಾಡೋಣ ಎಂದು ಹೇಳಿದರು.

Related posts

ದಿಡುಪೆ : ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ ಮಸ್ಜಿದುಲ್ ಹಿದಾಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಯಕ್ಷ ಸಂಭ್ರಮ- 2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನೆರಿಯದಲ್ಲಿ ಬಿಜೆಪಿಯ ಬೃಹತ್‌ ಸಾರ್ವಜನಿಕ ಪ್ರಚಾರ ಸಭೆ

Suddi Udaya

ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಮಾ.15ರಂದು ಸೌತಡ್ಕದಲ್ಲಿ, ವಿಶ್ವ ಮಹಿಳಾ ದಿನಾಚರಣೆ, ಸಂಜೀವಿನಿ ಸಂತೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆ

Suddi Udaya

ವಾಣಿ ಕಾಲೇಜ್ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya
error: Content is protected !!