ಕಾಶಿಪಟ್ಣ ಕೇಳದಪೇಟೆ ಮಸೀದಿಗೆ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಕಾಶಿಪಟ್ಣ ಕೇಳದಪೇಟೆ ಮುಹಮ್ಮದೀಯ ಜುಮ್ಮಾ ಮಸೀದಿಯ (ಜಮಾತ್ ನ) ನೂತನ ಖಾಝಿಯಾಗಿ ಜಿಲ್ಲಾ ಖಾಝಿಯವರಾದ ಶೈಖುನಾ ತ್ವಾಖ ಅಹ್ಮದ್ ಅಲ್ ಅಝಹರಿ ಉಸ್ತಾದ್ ಅವರು ಅಧಿಕಾರ ಸ್ವೀಕರಿಸಿದರು.


ಜುಮ್ಮಾ ನಮಾಝ್ ಬಳಿಕ ಮಸೀದಿಯಲ್ಲಿ ನಡೆದ ಖಾఝి ಸ್ವೀಕಾರ ಸಮಾರಂಭದಲ್ಲಿ ಸಾಲ್ಮರ ದಾರುಲ್ ಹಸನಿಯ್ಯ ಹಿಫ್ಲ್ & ದ ಅವಾ ಕಾಲೇಜಿನ ಅಧ್ಯಕ್ಷ ಸಯ್ಯದ್ ಅಲ್ ಹಾದಿ ಶರಫುದ್ದೀನ್ ತಂಙಳ್ ರವರು ಖಾಝಿ ಪಟ್ಟ ನೀಡಿದರು.
ಈ ಹಿಂದಿನ ಖಾಝಿಯಾಗಿದ್ದ ಶೈಖುನಾ ಅಲ್ ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅವರ ನಿಧನದಿಂದಾಗಿ ತೆರವಾಗಿದ್ದ ಖಾಝಿ ಸ್ಥಾನವನ್ನು ತ್ವಾಖಾ ಉಸ್ತಾದ್ ಅವರಿಗೆ ನೀಡಲಾಗಿ ನೂತನ ಖಾಝಿಯಾಗಿ ಅಧಿಕಾರ ನೀಡಲಾಯಿತು.
ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರು ಅಬೂಬಕ್ಕರ್ ಹಾಜಿ ಅವರ ಅನುಸ್ಮರಣಾ ಭಾಷಣ ಮಾಡಿದರು.


ಈ ಸಂದರ್ಭದಲ್ಲಿ ಅಂಗರಕರಿಯ ಸಯ್ಯದ್ ಅಕ್ರಮ್ ಅಲೀ ತಂಙಳ್ , ಡಿ.ಎ.ಉಸ್ಮಾನ್ ಹಾಜಿ ತೋಡಾರ್ , ಪಿ ಎಚ್ ಅಹ್ಮದ್ ಹುಸೈನ್, ಅಶ್ರಫ್ ಫೈಝಿ ಅರ್ಕಾಣ, ಮೂಡುಬಿದಿರೆ ಮಸೀದಿಯ ಅಧ್ಯಕ್ಷರಾದ ಅಬ್ದುರಹ್ಮಾನ್, ಮಂಗಳೂರು ಹಿದಾಯ ಫೌಂಡೇಶನ್ ನ ಕೆ.ಎಸ್.ಅಬೂಬಕ್ಕರ್, ಜಿಲ್ಲಾ ವಕ್ಸ್ ಬೋರ್ಡ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಮರೋಡಿ, ಅಶ್ರಫ್ ಫೈಝಿ, ವಾಲ್ಪಾಡಿ ಮಸೀದಿಯ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ, ಫಾಯಿಝ್ ಫೈಝಿ, ಇಸ್ಮಾಯಿಲ್‌ ಕೆ.ಪೆರಿಂಜೆ, ಯು.ಕೆ.ಮುಹಮ್ಮದ್ ಹಾಜಿ, ಎಂ.ಜಿ.ಮುಹಮ್ಮದ್‌ ಹಾಜಿ ತೋಡಾರ್, ದಾರುನ್ನೂ‌ರ್ ಸಂಸ್ಥೆಯ ಸದರ್ ಮುದಗ್ರಿಸ್ ಹುಸೈನ್ ರಹ್ಮಾನಿ, ಮಾಲಿಕ್ ಅಝೀಝ್, ಅಶ್ರಫ್ ಮರೋಡಿ, ಫಾರೂಕ್ ವಿಶಾಲ್ ನಗರ, ವಾಲ್ಪಾಡಿ ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್, ಮುಹಮ್ಮದ್ ಹುಸೈನ್ ಜೀಲಾನಿ, ಸಿರಾಜುದ್ದೀನ್ ಫೈಝಿ, ಉಸ್ಮಾನ್ ಸೂರಿಂಜೆ, ಪತ್ರಕರ್ತ ಹೆಚ್.ಮುಹಮ್ಮದ್ ವೇಣೂರು, ಮುಹಮ್ಮದ್ ದೋಣಿಬಾಗಿಲು, ಉಮರಬ್ಬ ತೇರಬಿದಿ, ಇಸ್ಮಾಯಿಲ್, ಅಲ್ತಾಫ್ ಗಂಟಾಲ್ಕಟ್ಟೆ, ಯು.ಕೆ.ಇರ್ಫಾನ್, ಮುಹಿಯುದ್ದೀನ್ ಗುಂಡುಕಲ್ಲು, ಇಟ್ಬಾಲ್ ಮರೋಡಿ, ಝಕರಿಯಾ ಯೂಸುಫ್, ಶಾಹುಲ್ ಹಮೀದ್, ಅಬ್ದುರ್ರಹ್ಮಾನ್ ಹಾಜಿ ಮತ್ತಿತರರು ಭಾಗವಹಿಸಿದ್ದರು.

ಈ ವೇಳೆ ಮಸೀದಿಯ ಅಭಿವೃದ್ಧಿಗೆ ಸಹಕರಿಸಿದ ಕೆ.ಎಸ್. ಅಬೂಬಕ್ಕರ್, ಜಿಲ್ಲಾ ವಕ್ಸ್ ಬೋರ್ಡ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಮತ್ತಿತರರನ್ನು ಸನ್ಮಾನಿಸಲಾಯಿತು.


ಮಸೀದಿಯ ಖತೀಬರಾದ ಶಾಫಿ ಅಲ್ ಅಝ್ಹರಿ ಸ್ವಾಗತಿಸಿದರು. ಮಸೀದಿ ಕಮಿಟಿಯ ಅಧ್ಯಕ್ಷ ಇಲ್ಯಾಸ್ ಅಹ್ಮದ್ ನೂತನ ಖಾಝಿಯವರ ಪರಿಚಯಿಸಿದರು. ಕಾರ್ಯದರ್ಶಿ ಎಂ.ಅಬ್ದುಲ್ ರಹ್ಮಾನ್ ಮಸೀದಿಯ ಕುರಿತು ಮಾಹಿತಿ ನೀಡಿದರು. ಶಾಫಿ ಕಿರೋಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment

error: Content is protected !!