37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ರಾಜ್ಯದ “ಅನ್ನಭಾಗ್ಯ ಯೋಜನೆ” ಯ ಹಣ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದಿಲ್ಲ: ವಿಧಾನ ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ರವರ ಪ್ರಶ್ನೆಗೆ ಸಚಿವರ ಉತ್ತರ

ಬೆಳ್ತಂಗಡಿ : ರಾಜ್ಯದ “ಅನ್ನಭಾಗ್ಯ ಯೋಜನೆ” ಯ ಹಣ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, “ಅನ್ನಭಾಗ್ಯ ಯೋಜನೆ” ಯ ಅನುಷ್ಠಾನಕ್ಕೆ ಪದೇಪದೇ ತಾಂತ್ರಿಕ ಅಂಶಗಳು ಕಾರಣಗಳೇನು? ಎಂದು ವಿಧಾನಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ರವರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಹಾಗೂ ಕಾನೂನು ಮಾಪನ ಸಚಿವರಿಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಹಾಗೂ ಕಾನೂನು ಮಾಪನ ಸಚಿವ ಕೆ.ಎಸ್ ಮುನಿಯಪ್ಪ ರವರು ಅನ್ನಭಾಗ್ಯ DBT ಯೋಜನೆಗೆ ಸಂಬಂಧಿಸಿದಂತೆ ಮೇ – 2024 ರ ಮಾಹೆಯವರೆವಿಗೂ ಅರ್ಹ ಫಲಾನುಭವಿಗಳ ಖಾತೆಗೆ ಹಣವನ್ನು ಪಾವತಿಸಲಾಗಿರುತ್ತದೆ. ಹಾಗೂ ಜೂನ್ 2024 ರ ಮಾಹೆಯ DBT ಹಣ ವರ್ಗಾವಣೆ ಕಾರ್ಯ ಪ್ರಗತಿಯಲ್ಲಿರುತ್ತದೆ. K2 ಮತ್ತು DBT ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ತಂದ ಹಿನ್ನೆಲೆಯಲ್ಲಿ ಏಪ್ರಿಲ್ 2024 ರ ಮಾಹೆಯ DBT ಹಣ ವರ್ಗಾವಣೆ ಕಾರ್ಯ ಸ್ವಲ್ಪ ವಿಳಂಬವಾಗಿರುತ್ತದೆ. ನಂತರ DBT ಹಣ ವರ್ಗಾವಣೆ ಕಾರ್ಯದಲ್ಲಿ ಅಡ್ಡಿ ಯಾಗಿರುವುದಿಲ್ಲ ಎಂದು ಉತ್ತರಿಸದಿರು.

Related posts

ಎಸ್. ಡಿ. ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಪ್ರಶಾಂತ್ ಶೆಟ್ಟಿ ನೀನಾಸಂ ಭೇಟಿ

Suddi Udaya

ಕುತ್ಲೂರು: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಮಾಂಡೋ ವೀಲ್ ಚೇರ್ ವಿತರಣೆ

Suddi Udaya

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಬೆಳ್ತಂಗಡಿ ಹಳೆಕೋಟೆ ಬಳಿ ಟಯರ್ ಹೊತ್ತಿಸಿ ಆಕ್ರೋಶ

Suddi Udaya

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ನಾವೂರು: ಅಬೂಬಕ್ಕರ್ ರವರ ಮನೆ ಬಳಿ ಧರೆ ಕುಸಿತ

Suddi Udaya
error: Content is protected !!