28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾರ್ಯ: ಸರಳಿಕಟ್ಟೆ ಮೆಗಿನ ಪುಯಿಲದಲ್ಲಿ ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿಗಳು: ಅನಾಹುತ ಸಂಭವಿಸುವ ಮುನ್ನ ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

ಬಾರ್ಯ: ಗ್ರಾಮದ ಸರಳಿಕಟ್ಟೆ ಸರಕಾರಿ ಪ್ರೌಡ ಶಾಲೆಯ ಸಮೀಪ ಖಾನ (ಮಲ್ಲಕಲ್) ಮೆಗಿನ ಪುಯಿಲದಲ್ಲಿ ಸುಮಾರು ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಬಹಳಷ್ಟು ಕ್ಷೀಣಿಸಿದ್ದು, ವರ್ಷದಲ್ಲಿ ಏಳೆಂಟು ಬಾರಿ ಈ ವಿದ್ಯುತ್ ತಂತಿ ಮಾರ್ಗಕ್ಕೆ ತುಂಡಾಗಿ ಬೀಳುತ್ತಿದೆ. ಈ ಭಾಗದ ಲೈನ್ ಮ್ಯಾನ್ ದೂರು ನೀಡಿದ ತಕ್ಷಣ ಬಂದು ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಅದೆಷ್ಟು ಬಾರಿ ಇಲಾಖೆಗೆ ಮನವಿ ಮಾಡಿದರೂ ಕೂಡಾ ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸುತ್ತಿಲ್ಲ. ಈ ಹಿಂದೆ ಮೆಸ್ಕಾಂ ಇಲಾಖೆಯ ಅದಾಲತ್ ನಲ್ಲಿ ಕೂಡ ದೂರು ದಾಖಲಿಸಲ್ಪಟ್ಟಿದೆ.


ಇದೀಗ ಮತ್ತೊಮ್ಮೆ ಇದೇ ಪರಿಸರದಲ್ಲಿ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗುವ ದಾರಿಯಲ್ಲೇ ಟ್ರಾನ್ಸ್ಫಾರ್ಮ್ ಕಂಬದಲ್ಲಿ ತಂತಿಯೊಂದು ಅದರ ಉಪಕರಣಗಳು ತುಂಡಾಗಿ ವಿದ್ಯುತ್ ತಂತಿಯು ನೇತಾಡುತ್ತಿದ್ದು, ಪ್ರಾಣಕ್ಕೆ ಕಂಟಕವಾಗಿದೆ. ವಿದ್ಯುತ್ ಕಂಬದ ಹತ್ತಿರದಲ್ಲಿ ಮನೆಗಳು ಇರುವುದರಿಂದ ಅನಾಹುತ ನಡೆಯುವ ಸಂಭವವಿದೆ. ಶೀಘ್ರದಲ್ಲಿ ದುರಸ್ತಿ ಕಾರ್ಯ ಮಾಡಿದರೆ ಅನಾಹುತ ತಪ್ಪಬಹುದು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪ್ರಾಣ ಹಾನಿ ಆಗುವ ಮೊದಲು ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸಬೇಕಾಗಿ ವಿನಂತಿಸಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ (ಪ್ರೌಢಶಾಲಾ ವಿಭಾಗ) 1 ಲಕ್ಷ ರೂ. ನೆರವು

Suddi Udaya

ಧರ್ಮಸ್ಥಳ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಎಸ್. ಎಮ್ .ಎ. ಉಜಿರೆ ರೀಜಿನಲ್ ವತಿಯಿಂದ ರಂಝನ್ ಕಿಟ್ ವಿತರಣೆ

Suddi Udaya

ಮುಂಡಾಜೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಂದಿನಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ಸಿರಿ ಸಂಸ್ಥೆಯ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ: ಡಾ.ಹೆಗ್ಗಡೆ ಕುಟುಂಬಸ್ಥರು, ಸಿರಿ ಸಂಸ್ಥೆಯ ನಿರ್ದೇಶಕರುಗಳು ಭಾಗಿ

Suddi Udaya

ಕೊಕ್ಕಡ : ಅಸೌಖ್ಯದಿಂದ ವಿದ್ಯಾರ್ಥಿನಿ ಸಾವು

Suddi Udaya
error: Content is protected !!