September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಶಾಲಾ ಮಕ್ಕಳ ರಕ್ಷಣೆಗೆ ಬೇಕಿದೆ ಮಚ್ಚಿನಕ್ಕೊಂದು ಬ್ಯಾರಿಕೇಡ್

ಮಚ್ಚಿನ ರಸ್ತೆಯ ಬದಿಯಲ್ಲಿಯೇ ಸರ್ಕಾರಿ ಉನ್ನತೀಕರಿಸಿದ ಶಾಲೆ, ಸರಕಾರಿ ಪ್ರೌಢಶಾಲೆ, ಅಂಗನವಾಡಿ ಕೇಂದ್ರ ಹಾಗೂ ನೂರಾರು ಮಕ್ಕಳು, ಸಾರ್ವಜನಿಕರು ಅಡ್ಡಾಡುವ ಸ್ಥಳವಾಗಿದ್ದು ಈ ಸ್ಥಳದಲ್ಲಿ ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ರಸ್ತೆದಾಟಲು ತೀರಾ ಕಷ್ಟ ಪಡುವಂತಾಗಿದೆ.

ಮಡಂತ್ಯಾರು-ಉಪ್ಪಿನಂಗಡಿ ಕಡೆಗೆ ಅತಿ ವೇಗದಲ್ಲಿ ಸಂಚರಿಸುವ ವಾಹನಗಳಿಂದ ರಸ್ತೆ ದಾಟುವುದೆ ಭಯದ ವಾತಾವರಣವಾಗಿದೆ ರಸ್ತೆಯ ಬದಿಯಲ್ಲಿ ಶಾಲೆಯ ಯಾವುದೇ ಸೂಚನಾ ಫಲಕವು ಇಲ್ಲದೆ ಇರುವುದರಿಂದ ವಾಹನ ಚಾಲಕರಿಗೂ ಅರಿವಿಗೆ ಬರದಂತಾಗುತ್ತಿದೆ. ಕಳೆದ ಒಂದು ಎರಡು ವರ್ಷಗಳ ಹಿಂದೆ ಇದೆ ವಿಷಯದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಿದ ತಕ್ಷಣ ಸ್ಪಂದಿಸಿದ ಬಿಲ್ಲವ ಸಂಘ ಮಚ್ಚಿನ ಇದರ ವತಿಯಿಂದ ಉದ್ಧಾರ ಮನಸ್ಸಿನಿಂದ ಉಚಿತವಾಗಿ ಬ್ಯಾರಿಕೇಡ್ ಒದಗಿಸಿಕೊಟ್ಟರು. ಆದರೆ ಅತಿ ವೇಗದಲ್ಲಿ ಬರುವ ವಾಹನಗಳು ಡಿಕ್ಕಿ ಹೊಡೆದು ನಜ್ಜು ಗುಜ್ಜುಗಿತ್ತಾದರು ” ಇತ್ತೀಚೆಗೆ ಅದು ಮಾಯವಾಯಿತು”.

ಈ ರಸ್ತೆಯಲ್ಲಿ ಶಾಲಾ ಪಕ್ಕದಲ್ಲಿ ರಸ್ತೆ ತಿರುವು ಇರುವುದರಿಂದ ವಾಹನಗಳು ಬರುವುದೇ ಕಾಣದಂತಾಗಿದೆ. ಶಾಲಾ ಮಕ್ಕಳ ರಕ್ಷಣೆಗಾಗಿ ದೊಡ್ಡ ಅನಾಹುತ ಸಂಭವಿಸುವ ಮುನ್ನ ಶಾಲಾ ಎಸ್ ಡಿ ಎಂ ಸಿ ಸಮಿತಿ, ಗ್ರಾಮ ಪಂಚಾಯಿತಿ, ಪೋಲಿಸ್ ಇಲಾಖೆ ಇತ್ತ ಗಮನಹರಿಸಿ ಬ್ಯಾರಿಕೇಡ್ ಅಳವಡಿಸುವಂತೆ ಸಾರ್ವಜನಿಕರ ಬೇಡಿಕೆಯಾಗಿದೆ.

ವರದಿ: ಹರ್ಷ ಬಳ್ಳಮಂಜ

Related posts

‘ದಸ್ಕತ್’ ತುಳು ಸಿನೆಮಾದ ಮೋಷನ್ ಪೋಸ್ಟರ್ ಗೆ ಫಿದಾ ಆದ ತುಳುನಾಡಿನ ದಿಗ್ಗಜರು

Suddi Udaya

ಉಜಿರೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Suddi Udaya

ಮಾವಿನಕಟ್ಟೆ ಮೋನಪ್ಪ ಶೆಟ್ಟಿ ನಿಧನ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ

Suddi Udaya

ಸೌತಡ್ಕ ಕ್ಷೇತ್ರಕ್ಕೆ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ದಿನಕರ್ ತೂಗುದೀಪ ದಂಪತಿ ಭೇಟಿ

Suddi Udaya
error: Content is protected !!