29.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಎಸ್. ಡಿ. ಯಂ. ಇಂಜಿನಿಯರಿಂಗ್ ಕಾಲೇಜಿಗೆ ವಿ.ಟಿ.ಯು ರ್‍ಯಾಂಕ್ ಹಾಗೂ ಶೇ. 100 ಫಲಿತಾಂಶ

ಉಜಿರೆ: ಶ್ರೀ ಧ. ಮಂ. ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಕು. ಪ್ರತೀಕ್ಷಾ ರವರು 2024 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಬಿ. ಇ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಒಂಬತ್ತನೇ ರ್‍ಯಾಂಕ್ ಪಡೆದಿರುತ್ತಾರೆ.

ಇವರು ಉಜಿರೆಯ ಕೃಷ್ಣ ಪ್ರಸಾದ್ ಮತ್ತು ಶ್ರೀಮತಿ ಹೇಮಾ ಆನಂದ್ ಅವರ ಸುಪುತ್ರಿ.
ಶ್ರೀ ಧ. ಮಂ. ಇಂಜಿನಿಯರಿಂಗ್ ಕಾಲೇಜು 2023-24 ಸಾಲಿನ ಅಂತಿಮ ವರ್ಷದ ಪರೀಕ್ಷೆಗಳಲ್ಲಿ ಎಲ್ಲಾ ಆರು ಇಂಜಿನಿಯರಿಂಗ್ ವಿಭಾಗಗಳಲ್ಲಿ ಶೇಕಡಾ 100 ಫಲಿತಾಂಶ ಪಡೆದಿರುತ್ತದೆ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ರವರು ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿರುವರೆಂದು ಪ್ರಾಂಶುಪಾಲರಾದ ಡಾ. ಅಶೋಕ್‌ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಗೆಲುವು: ಬೈಕ್ ಜಾಥದ ಮುಖೇನಾ ಗೆಲುವನ್ನು ಸಂಭ್ರಮಿಸಿದ ನಾಲ್ಕೂರಿನ ಕಾರ್ಯಕರ್ತರು

Suddi Udaya

ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಯವರಿಂದ ಸಾರ್ವಜನಿಕರಿಗೆ ಸೂಚನೆ

Suddi Udaya

ಕೊಯ್ಯೂರು ಸ .ಹಿ ಪ್ರಾ. ಶಾಲೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Suddi Udaya

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಬಿಎಂಎಸ್ ಸ್ಥಾಪನೆ ದಿನಾಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಸದಸ್ಯರಿಗೆ ತರಬೇತಿ ಕಾರ್ಯಗಾರ

Suddi Udaya
error: Content is protected !!