25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ (ರಿ.) ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 26ನೇ ವರ್ಷದ ಭಜನಾ ಕಮ್ಮಟವು ಸೆಪ್ಟೆಂಬರ್ 22 ರಂದು ಪ್ರಾರಂಭಗೊಂಡು ಸೆಪ್ಟೆಂಬರ್ 29 ರಂದು ಭಜನೋತ್ಸವದೊಂದಿಗೆ ಸಮಾಪನಗೊಳ್ಳಲಿದೆ.

ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅರ್ಹತೆಗಳು : 18 ವರ್ಷದಿಂದ 45 ವರ್ಷದ ಒಳಗಿನವರಾಗಿರಬೇಕು., ಭಜನೆಯಲ್ಲಿ ರಾಗ, ತಾಳ, ಲಯದ ಜ್ಞಾನವುಳ್ಳವರಾಗಿರಬೇಕು, ಇದುವರೆಗಿನ ಯಾವುದೇ ಭಜನಾ ಕಮ್ಮಟದಲ್ಲಿ ಭಾಗವಹಿಸದೇ ಇರುವವರಾಗಿರಬೇಕು, ಒಂದು ಭಜನಾ ಮಂಡಳಿಯಿಂದ 2 ಜನ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ, ತಾವು ಕಲಿತು, ಇನ್ನೊಬ್ಬರಿಗೆ ಕಲಿಸಿಕೊಡುವವರಾಗಿರಬೇಕು.
 

ಆಸಕ್ತರು ಸೆಪ್ಟೆಂಬರ್ 10ರ ಮೊದಲು ಸಂಬಂಧಪಟ್ಟ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಭಜನಾ ಕಮ್ಮಟದ ಸಂಚಾಲಕರಾದ ಟಿ. ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಭಜನಾ ಕಮ್ಮಟದ ಕಾರ್ಯದರ್ಶಿಗಳಾದ ವೀರು ಶೆಟ್ಟಿಯವರು ತಿಳಿಸಿದ್ದಾರೆ.
 ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9632064164, 8130132835, 9663464648

Related posts

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಕಾಂಗ್ರೇಸ್ ಸರ್ಕಾರದಿಂದ ಕಾನೂನುವ್ಯವಸ್ಥೆಯ ಅಪಹಾಸ್ಯ :ಬೆಳ್ತಂಗಡಿ ಬಿಜೆಪಿ ಮಂಡಲ ಆಕ್ರೋಶ

Suddi Udaya

ಕಳಿಯ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು : ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ವಾಣಿಜ್ಯ ಸಂಘದಿಂದ “ಯಶಸ್ಸಿನ ಮಂತ್ರ” ತರಬೇತಿ ಕಾರ್ಯಾಗಾರ

Suddi Udaya

ಮದ್ದಡ್ಕ ಶ್ರೀ ರಾಮ ಸೇವಾ ಸಮಿತಿ, ವಿ.ಹಿಂ.ಪ. ಭಜರಂಗದಳ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯಸಭಾ ಸದಸ್ಯರ ನಿಧಿಯಿಂದ ಮಂಜೂರುಗೊಂಡ ರೂ. 1.50 ಕೋಟಿ ಅನುದಾನದಲ್ಲಿ ಬೆಳ್ತಂಗಡಿ ತಾಲೂಕಿನ 121 ಶಾಲೆಗಳ ಸ್ಮಾರ್ಟ್ ಕ್ಲಾಸ್ ಟಿ.ವಿ ಹಸ್ತಾಂತರ

Suddi Udaya
error: Content is protected !!