April 2, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾರಿ ಟಯ‌ರ್ ಜೋಡಣೆ ವೇಳೆ ಅಪಘಾತ: ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ನಿವಾಸಿ ರಶೀದ್‌ ಗಂಭೀರ

ಬೆಳ್ತಂಗಡಿ: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಹೊರಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚ‌ರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್ ತಂದಿದ್ದರು. ಟಯ‌ರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್ ಸಮೇತ ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Related posts

ಬಂದಾರು: ಮೈರೋಳ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗದ ಹಾವಳಿ: ಅಪಾರ ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿ

Suddi Udaya

ಮಹಾಕುಂಭ ಮೇಳದಲ್ಲಿ ಗರ್ಡಾಡಿ, ನಿಟ್ಟಡೆ ಪಡಂಗಡಿ ಶಕ್ತಿ ಕೇಂದ್ರದ ಪ್ರಮುಖ್ ರಿಂದ ಪುಣ್ಯಸ್ನಾನ

Suddi Udaya

ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಆಗುಂಬೆ ಗ್ರಾ.ಪಂ. ಗೆ ವರ್ಗಾವಣೆ

Suddi Udaya

ಉಜಿರೆಯ ಕಿರಣ್ ಆಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್ ಯಂತ್ರದ ಕೊಡುಗೆ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya
error: Content is protected !!