ಬೆಳ್ತಂಗಡಿ: ವಿಜಯ್ ಕುಮಾರ್ ಜೈನ್ ಸಾರಥ್ಯದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಧರ್ಮಸ್ಥಳ ಪ್ರಣವ್ ಸಭಾಂಗಣದಲ್ಲಿ ಜು.21 ರಂದು ನಡೆದ ಪದಗ್ರಹಣ ಸಮಾರಂಭದಲ್ಲಿ ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆಗೊಂಡಿತು.
ಮಕ್ಕಳಿಗಾಗಿಯೇ 26 ಗೀತೆಗಳನ್ನು ಒಳಗೊಂಡ ಈ ಪುಸ್ತಕವನ್ನು ಕರ್ನಾಟಕದ ಮುದ್ದು ಮಕ್ಕಳಿಗೆ ಅರ್ಪಿಸಿದರು. ಮುನ್ನುಡಿಯನ್ನು ದಿನೇಶ್ ಹೊಳ್ಳ ರವರು ಬರೆದಿದ್ದು, ಮುಖಪುಟ ವಿನ್ಯಾಸವನ್ನು ಪ್ರಾಂಜಲಿ ನಾವಡ ರಚಿಸಿದ್ದಾರೆ.
ಉಜಿರೆಯ ಉದ್ಯಮಿ ಲ|ನಿತ್ಯಾನಂದ ನಾವರ ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಜೈನ್ ಆಮಂತ್ರಣ, ಕಲಾಪೋಷಕ ಭುಜಬಲಿ ಧರ್ಮಸ್ಥಳ , ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್. ಡಿ, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ ಸುವರ್ಣ, ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ ಹೆಚ್.ಪ್ರಕಾಶ್ ಶೆಟ್ಟಿ, ಬೆಳ್ತಂಗಡಿ ಜೆಸಿಐ ಅಧ್ಯಕ್ಷ ರಂಜಿತ್ ಎಚ್ ಡಿ, ಉಜಿರೆ ಡೆಂಟಲ್ ಕ್ಲಿನಿಕ್ ನ ದೀಪಾಲಿ ಡೋಂಗ್ರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.